ನವದೆಹಲಿ: ಮದುವೆ ಸಮಾರಂಭಗಳಲ್ಲಿ ಫೋಟೋಗ್ರಾಫರ್ ಕಾರ್ಯ ಶ್ಲಾಘನೀಯ.. ಬಿಡುವಿಲ್ಲದ ಅವರ ಕಾರ್ಯವನ್ನು ಗಮನಿಸುವವರು ತುಸು ಕಡಿಮೆ. ಮದುವೆಯ ಉಸ್ತುವಾರಿ ವಹಿಸಿಕೊಂಡವರು ಮದುವೆ ಬರುವರಿಗೆಲ್ಲ ಊಟ ಮಾಡಿಕೊಂಡು ಹೋಗಿ ಎಂದು ಹೇಳುತ್ತಾರೆ. ಆದರೆ ಬಹಳಷ್ಟು ಸಂದರ್ಭಗಳಲ್ಲಿ ಫೋಟೋಗ್ರಾಫರ್ ಗೆ ಈ ಆಫರ್ ನ್ನು ನೀಡುವುದೇ ಇಲ್ಲ.
ಅಂಥದ್ದೇ ಒಂದು ಘಟನೆ ದೆಹಲಿಯಲ್ಲಿ ನಡೆದಿದ್ದು, ಇದೀಗ ಭಾರಿ ವೈರಲ್ ಆಗಿದೆ. ಅದಕ್ಕೆ ಕಾರಣ, ಊಟ, ತಿಂಡಿ, ನೀರನ್ನೂ ಕೊಡದೆ ದಿನಪೂರ್ತಿ ದುಡಿಸಿಕೊಂಡ ಕಾರಣ ಫೋಟೋಗ್ರಾಫರ್ ಸಿಟ್ಟಿನಿಂದ ಸಂಜೆ ಮದುವೆ ಸಮಾರಂಭ ಸಂಪೂರ್ಣ ಫೋಟೋಗಳನ್ನು ವಧು-ವರನ ಎದುರಿಗೇ ಡಿಲೀಟ್ ಮಾಡಿ ಮದುವೆ ಮನೆಯಿಂದ ಹೊರನಡೆದಿದ್ದಾನೆ.
ಹೌದು ಬೆಳಗಿನ ಜಾವದಿಂದ ಸಂಜೆಯವರೆಗೂ ಮದುವೆ ಕಾರ್ಯಕ್ರಮ ನಡೆದಿದೆ. ಆದರೆ ಒಂದೇ ಒಂದು ಸಲವೂ ಯಾರೂ ಈ ಫೋಟೋಗ್ರಾಫರ್ ನನ್ನು ಮಾತನಾಡಿಸಲಿಲ್ಲ. ಊಟ, ತಿಂಡಿಗೂ ಕೇಳಲಿಲ್ಲ. ಈತ ಅಲ್ಲಿರುವವರ ಬಳಿ ಬಾಯಿಬಿಟ್ಟು ಹೇಳಿದರೂ ಇದೊಂದು ಫೋಟೋ ಇದೊಂದು ಫೋಟೋ ಎನ್ನುತ್ತಲೇ ಕಾಲ ಕಳೆದಿದ್ದಾರೆ. ಇದರಿಂದ ಸಿಟ್ಟಿಗೆದ್ದ ಫೋಟೋಗ್ರಾಫರ್ ಮದುವೆ ಕಾರ್ಯಕ್ರಮ ಮುಗಿಯುವವರೆಗೆ ಕಾದು ನಂತರ ಸಂಪೂರ್ಣ ಫೋಟೋ ಡಿಲೀಟ್ ಮಾಡಿ ಸೇಡು ತೀರಿಸಿಕೊಂಡಿದ್ದಾನೆ!
‘ಸಂಜೆಯವರೆಗೂ ಊಟ, ತಿಂಡಿ ನೀಡಲಿಲ್ಲ. ಸಿಕ್ಕಾಪಟ್ಟೆ ಸೆಖೆ ಬೇರೆ ಇತ್ತು. ಈ ನಡುವೆ ಒಂದು ಲೋಟ ನೀರನ್ನೂ ಯಾರೂ ಕೇಳಲಿಲ್ಲ. ಆದ್ದರಿಂದ ಹೀಗೆ ಮಾಡಿದೆ ಎಂದು ತನಗಾಗಿರುವ ಅನುಭವಗಳನ್ನು ಫೋಟೋಗ್ರಾಫರ್ ಜಾಲತಾಣದಲ್ಲಿ ಶೇರ್ ಮಾಡಿದ್ದಾನೆ .
ಈ ಫೋಸ್ಟ್ ಗೆ ಸಾಕಷ್ಟು ಕಮೆಂಟ್ ಗಳು ಬಂದಿದ್ದು, ತಾವು ಇನ್ನುಮುಂದೆ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದವರೇ ಹೆಚ್ಚು..
PublicNext
01/10/2021 10:14 pm