ಮಾತೆಯ ಎದೆ ಹಾಲು ಅಮೃತ ಸಮಾನ ಎಂಬುದು ಸರ್ವ ವಿದಿತ. ಹಾಗೆಯೇ ಗೋ ಮಾತೆಯ ಹಾಲು ಸೇವಿಸದವರು ಅತಿ ವಿರಳ. ಸಜ್ಜನ- ದುರ್ಜನ ಎಂದು ನೋಡದೆ ಎಲ್ಲರಿಗೂ ಹಾಲು ಕೊಡುವ ಗೋವು, ಮಾನವರ ಎರಡನೇ ತಾಯಿ ಎಂಬುದು ಅತಿಶಯೋಕ್ತಿಯಲ್ಲ.
ಆಬಾಲ ವೃದ್ಧರಾದಿಯಾಗಿ ಇತರ ಜೀವಿಗಳು ಕೂಡ ಗೋ ಮಾತೆಯ ಹಾಲಿನ ಸವಿಯುಂಡು ಬೆಳೆದವರೇ. ಅನಾಥ ಸಾಕು ಪ್ರಾಣಿ-ಪಕ್ಷಿಗಳಿಂದ ತೊಡಗಿ ಅಮ್ಮನಿಲ್ಲದ, ತಬ್ಬಲಿ ಮಗುವಿನ ವರೆಗೂ ಪ್ರೀತಿ- ಮಮತೆಯಿಂದ ತನ್ನೊಡಲು ಬಸಿದ ಹಾಲು ಉಣಿಸುವಾಕೆ ಈ 'ದೇವತೆ'.
ಈ ವೀಡಿಯೊದಲ್ಲಿ ಮಗುವೊಂದು ತನ್ನಜ್ಜಿಯ ಆಸರೆಯಲ್ಲಿ ಗೋ ಮಾತೆಯ ಹಾಲು ಕುಡಿಯುತ್ತಿದೆ. ಈ ಚಿತ್ರಣವನ್ನು ಕಂಡು ಅಜ್ಜಿಯ ಮೊಗದಲ್ಲಿಯೂ ಸಂತೃಪ್ತಿ, ಖುಷಿಯ ಭಾವ ಎದ್ದು ಕಾಣುತ್ತಿದೆ.
PublicNext
30/09/2021 02:27 pm