ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಾಧವ್ ಗಿಟ್ಟೆ ಎಂಬ ಗಟ್ಟಿಗ....ಯುವ ಪೀಳಿಗೆಗೆ ಮಾದರಿಯಾದ ಐಎಎಸ್ ಅಧಿಕಾರಿ

ಮಾಧವ್ ಗಿಟ್ಟೆ ಎಂಬ ಯುವಕನ ಸ್ಥಿತಿಯಲ್ಲಿ ಬೇರೆ ಯಾರಾದರೂ ಇದ್ದರೆ ಸೋಲನ್ನೊಪ್ಪುತ್ತಿದ್ದರು. ಕಿತ್ತು ತಿನ್ನುವ ಬಡತನದಿಂದಾಗಿ ಶಿಕ್ಷಣಕ್ಕಾಗಿ ಮನೆ,ಹೊಲ ಗಿರವಿ ಇಡಬೇಕಾಯಿತು, ಮಧ್ಯ ಒಂದು ವರ್ಷ ಕಲಿಕೆ ಬಿಟ್ಟು ಕೂಲಿನಾಲಿ ಮಾಡಬೇಕಾಯಿತು. ಆದರೆ ಅಂಜಲಿಲ್ಲ ಅಳುಕಲಿಲ್ಲ. ತಮ್ಮ ಉನ್ನತ ಶಿಕ್ಷಣದ ಕನಸನ್ನು ಒತ್ತೆ ಇಡಲಿಲ್ಲ, ಕೂಲಿ ಕೆಲಸ ಬಿಡಲಿಲ್ಲ

ಹೊಲದಲ್ಲಿ ಬೆವರು ಸುರಿಸಿ, ಆ ಕೂಲಿ ಹಣದಿಂದಲೇ ಇಂದು ಐಎಎಸ್ ಆದ ಓರ್ವ ಅಧಿಕಾರಿಯ ಯಶೋಗಾಥೆ ಇದು. ಇವರು ಬೇರಾರೂ ಅಲ್ಲ ಇತ್ತೀಚೆಗೆ ಅಧಿಕಾರ ವಹಿಸಿಕೊಂಡ ನಮ್ಮ ಧಾರವಾಡ ಜಿಲ್ಲೆ ಅಳ್ನಾವರದ ನೂತನ ಪ್ರೊಬೇಶ್ನರಿ ತಹಸಿಲ್ದಾರ್ ಮಾಧವ್ ಗಿಟ್ಟೆ.

ಮಹಾರಾಷ್ಟ್ರ ನಾಂದೇಡ್ ಜಿಲ್ಲೆಯ ಕುಗ್ರಾಮವೊಂದರ ಬಡ, ಅನಕ್ಷರಸ್ಥ ಕುಟುಂಬದಿಂದ ಬಂದ ಮಾಧವ್ ಪಟ್ಟ ಶ್ರಮ, ಅನುಭವಿಸಿದ ನೋವು ಅಪಾರ.

ಆರ್ಥಿಕ ತೊಂದರೆಯಿಂದಾಗಿ 11 ನೇ ತರಗತಿ ನಂತರ ಒಂದು ವರ್ಷ ಶಿಕ್ಷಣ ನಿಲ್ಲಿಸಬೇಕಾಯಿತು. ವಿದ್ಯಾಭ್ಯಾಸಕ್ಕೆ ಹಣ ಹೊಂದಿಸಲು ತಂದೆಯೊಂದಿಗೆ ತಮ್ಮ ನಾಲ್ಕು ಎಕರೆ ಹೊಲದಲ್ಲಿ ಕೆಲಸಕ್ಕಿಳಿದರು. ಅದೂ ಸಾಲದಿದ್ದಾಗ ಪಕ್ಕದ ಹೊಲದಲ್ಲಿ ಕೂಲಿ ಕೆಲಸ ಆರಂಭಿಸಿದರು. ಅದೇ ಸಂದರ್ಭದಲ್ಲಿ ತಾಯಿಗೆ ಕ್ಯಾನ್ಸರ್ ಚಿಕಿತ್ಸೆ ಭಾರ ಇವರ ಮೇಲಿತ್ತು. ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ತಾಯಿ ಮೃತಪಟ್ಟರು.

12 ನೇ ತರಗತಿಯಲ್ಲಿ ಕಡಿಮೆ ಅಂಕ ಬಂದಿದ್ದರಿಂದ ಸರಕಾರಿ ಪಾಲಿಟೆಕ್ನಿಕ್ ಹಾಗೂ ಐಟಿಐದಲ್ಲಿ ಪ್ರವೇಶ್ ಸಿಗಲಿಲ್ಲ. ನಿರಾಶರಾಗದೆ ಮತ್ತೇ ಹೊಲದಲ್ಲಿ ಕೂಲಿ ಮುಂದುವರಿಸಿದರು. ಆದರೆ ಅದೇ ಸಮಯದಲ್ಲಿ ಕ್ಷಾಮ ಬಿದ್ದಿದ್ದರಿಂದ ಕೂಲಿ ಕೆಲಸವೂ ಹೋಯಿತು. ಅಲ್ಲಿಂದ ಪುಣೆಗೆ ಬಂದು ಕಂಪನಿಯೊಂದರಲ್ಲಿ ಹೆಲ್ಪರ್ ಕೆಲಸಕ್ಕೆ ಸೇರಿದರು.

ನಂತರ ಖಾಸಗಿ ಪಾಲಿಟೆಕ್ನಿಕ್ ಪ್ರವೇಶಕ್ಕಾಗಿ ಏಳು ಸಾವಿರ ರೂ ಹೊಂದಿಸಲು ಪರದಾಡಬೇಕಾಯಿತು. 2008 ರಲ್ಲಿ ಉತ್ತಮ ಅಂಕ ಗಳಿಸಿದ್ದರಿಂದ ಇಂಜನೀಯರಿಂಗ್ ಕಾಲೇಜ್ ಪ್ರವೇಶ ಸುಲಭವಾಯಿತು. ಆಗ 75 ಸಾವಿರ ರೂ ಕಾಲೇಜು ಫೀಗಾಗಿ ಹೊಲ ಒತ್ತೆ ಇಟ್ಟು, ಮಾಧವ್ ಅವರ ತಂದೆ ಪ್ರೋತ್ಸಾಹ ನೀಡಿದರು.

ಇಂಜನೀಯರಿಂಗ್ ಡಿಗ್ರಿ ಮುಗಿಯುತ್ತಲೆ ಅವರಿಗೆ ಸಾಫ್ಟ್ ವೇರ್ ಕಂಪನಿಯಲ್ಲಿ ನೌಕರಿ ಸಿಕ್ಕಿತು. ಐಎಎಸ್ ಆಗಲೇಬೇಕೆಂಬುದು ಅವರ ಹಠವಾಗಿತ್ತು. ಮೊದಲ ಬಾರಿ 2018 ಯುಪಿಎಸ್ಸಿ ಪರಿಕ್ಷೆಯಲ್ಲಿ 567 Rank ಪಡಿದಿದ್ದರು. ಆದರೆ ಅದು ಅವರಿಗೆ ತೃಪ್ತಿ ನೀಡಿರಲಿಲ್ಲ. ಹೆಚ್ಚಿನ ಅಧ್ಯಯನದೊಂದಿಗೆ 2019 ರಲ್ಲಿ ಮತ್ತೇ ಪರೀಕ್ಷೆ ಕೊಟ್ಟು ಯುಪಿಎಸ್ಸಿಯಲ್ಲಿ 210 Rank ಪಡೆದು ತಮ್ಮ ಐಎಎಸ್ ಕನಸನ್ನು ನನಸು ಮಾಡಿಕೊಂಡು ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ.

ಪಬ್ಲಿಕ್ ನೆಕ್ಸ್ಟ್ ವಿಶೇಷ ಕೇಶವ ನಾಡಕರ್ಣಿ.

Edited By :
PublicNext

PublicNext

30/09/2021 11:20 am

Cinque Terre

85.24 K

Cinque Terre

15

ಸಂಬಂಧಿತ ಸುದ್ದಿ