ಗದಗ: ಸಂಗೀತ ಸರಸ್ವತಿಯು ಯಾರಿಗೆ ಒಲಿಯುತ್ತಾಳೆ ಎಂಬುವುದೇ ತಿಳಿಯುವುದಿಲ್ಲ. ಸಾಕಷ್ಟು ಸಾಹಸವನ್ನು ಮಾಡಿದರು. ಸ್ವರ,ರಾಗ, ಲಯ, ತಾಳ ಒಂದಕ್ಕೊಂದು ಸರಿಹೊಂದುವುದೇ ಕಷ್ಟ. ಆದರೆ ಇಲ್ಲೊಬ್ಬ ಕುರಿಗಾಹಿಯ ಸಂಗೀತ ಕೃಷಿಯನ್ನು ನೋಡಿದರೇ ನೀವು ಅಚ್ಚರಿ ಪಡುವುದು ಖಂಡಿತ. ಹಾಗಿದ್ದರೇ ಯಾರು ಆ ಕುರಿಗಾಹಿ ಅಂತೀರಾ ಇಲ್ಲಿದೆ ನೋಡಿ ಕಂಪ್ಲಿಟ್ ಡಿಟೈಲ್ಸ್....
ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಮಜ್ಜೂರ ತಾಂಡಾದ ಕುರಿಗಾಹಿಯ ಕೋಟಿ ವಿದ್ಯೆ ಮೇಟಿ ತಳಗೈತೀ ಜಗತ್ತಿಗೆ ಅನ್ನಹಾಕುವ ಅನ್ನದಾತ ರೈತ ಅಂತ್ತ ಶೃತಿ ಸಾರತೈತಿ ಎಂಬುವಂತ ಹಾಡು ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ಯ ಸಖತ್ ವೈರಲ್ ಆಗಿದೆ. ಹೌದು..
ಶಿರಹಟ್ಟಿ ತಾಲೂಕಿನ ಮಜ್ಜೂರ ತಾಂಡಾದ ಕುರಿಗಾಹಿ ರಮೇಶ ಲಮಾಣಿ ಹಾಡಿರುವ ಹಾಡು ಕೇಳಿ ನೆಟ್ಟಿಗರು ಫಿದಾ ಆಗಿದ್ದಾರೆ. ಕುರಿ ಕಾಯುತ್ತಲೇ ರಮೇಶ ಲಮಾಣಿ ತಾನೇ ಸ್ವಂತವಾಗಿ ರೈತರ ಮೇಲೆ ಹಾಡೊಂದನ್ನು ರಚಿಸಿ ಹಾಡಿದ್ದಾರೆ. ಅಲ್ಲದೇ ತಾನು ಹಾಡುತ್ತಿರುವುದನ್ನು ವಿಡಿಯೋ ಮಾಡಿದ ಅವನ ಗೆಳೆಯ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ. ಹೀಗಾಗಿ ಸದ್ಯ ರಮೇಶ ಹಾಡು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
ಐದನೇ ತರಗತಿವರೆಗೆ ಓದಿರುವ ರಮೇಶ ಕೋಟಿ ವಿದ್ಯೆ ಮೇಟಿ ತಳಗೈತಿ ಜಗತ್ತಿಗೆ ಅನ್ನ ಹಾಕುವ ದಾತ ಶೃತಿ ಸಾರತೈತಿ ಹಾಡು ರಚಿಸಿ ಹಾಡಿದ್ದಾರೆ.ಸದ್ಯ ರೈತರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಹಾಗೂ ಪಂಚಾಯತಿಯಲ್ಲಿ ಬರುವ ಯೋಜನೆಯ ದುಡ್ಡನ್ನು ಹೇಗೆ ನುಂಗುತ್ತಿದ್ದಾರೆ ಇದನ್ನೇ ವಿಷಯವನ್ನಾಗಿಸಿಕೊಂಡು ಕುರಿಗಾಯಿ ರಮೇಶ ಹಾಡನ್ನು ರಚಿಸಿ ಅದಕ್ಕೆ ಧ್ವನಿ ನೀಡಿದ್ದಾರೆ.
ಶಿರಹಟ್ಟಿ ತಾಲೂಕಿನ ಮಜ್ಜೂರ ತಾಂಡಾದ ರಮೇಶನ್ನು ಸುತ್ತಮುತ್ತಲಿನ ಗ್ರಾಮದ ಜನರು ಹನಮಂತ ಲಮಾಣಿ ಬಂದಾ ನೋಡು ಎಂದು ಹೇಳುತ್ತಿದ್ದಾರೆ. ಹೀಗೆ ಸುಮಾರು ಹಾಡುಗಳನ್ನು ತಾನೇ ರಚಿಸಿ ಕುರಿ ಕಾಯುತ್ತಲ್ಲೇ ಹಾಡುತ್ತಿದ್ದಾನೆ ಗ್ರಾಮದ ಜನರು ಇವರಿಗೊಂದು ವೇದಿಕೆ ಕಲ್ಪಿಸಿಕೊಡಿ ಎಂದು ಹೇಳುತ್ತಿದ್ದಾರೆ.
PublicNext
26/09/2021 04:50 pm