ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

80ರ ಇಳಿವಯಸ್ಸಿನಲ್ಲೂ ಅಜ್ಜಿಯ ಸ್ವಾವಲಂಬಿ ಜೀವನ

ಕೆಲವರಿಗೆ ದುಡಿಮೆ ಎಂದರೇ ಸಾಕು ಮೈ ಮುಳ್ಳಾಗುತ್ತದೆ. ಆದರೆ ಇಳಿವಯಸ್ಸಿನಲ್ಲೂ ಸ್ವಾವಲಂಬಿಗಳಾಗಿ ಬದುಕಿ ಅನೇಕರು ಮಾದರಿಯಾಗಿದ್ದಾರೆ. ಇದಕ್ಕೆ ಪಂಜಾಬ್‌ನ ವೃದ್ಧೆಯೊಬ್ಬರು ಹೊರತಾಗಿಲ್ಲ.

ಹೌದು. ಪಂಜಾಬ್‌ನ ಅಮೃತಸರದಲ್ಲಿ 80 ವರ್ಷದ ಮಹಿಳೆಯೊಬ್ಬರು ಪುಟ್ಟ ಜೂನ್‌ ಅಂಗಡಿ ನಡೆಸುತ್ತಾ ಜೀವನ ಸಾಗಿಸುತ್ತಿದ್ದಾರೆ. ಅಜ್ಜಿಯ ಜೂಸ್ ಸ್ಟಾಲ್ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಅಜ್ಜಿಯ ಜೀವನ ಶೈಲಿಗೆ ಸಲಾಂ ಎಂದಿದ್ದಾರೆ. ಜೊತೆಗೆ ಆ ಹಿರಿಯ ಜೀವಕ್ಕೆ ನೆರವು ನೀಡುವಂತೆ ಕೇಳಿಕೊಂಡಿದ್ದಾರೆ.

ಅಜ್ಜಿ ಜೂಸ್ ಮಾಡುತ್ತಿರುವ ವಿಡಿಯೋವನ್ನು ಟ್ವೀಟ್ ಮಾಡಿರುವ ಆರಿಫ್ ಷಾ ಎಂಬವರು, "80 ವರ್ಷದ ಅಜ್ಜಿ ಅಮೃತಸರದಲ್ಲಿ ಒಂದು ಅಂಗಡಿಯನ್ನು ನಡೆಸುತ್ತಿದ್ದಾರೆ. ಸ್ವಾವಲಂಬಿ ಜೀವನಕ್ಕಾಗಿ ಅವರು ವೃದ್ಧಾಪ್ಯದಲ್ಲಿಯೂ ಶ್ರಮಿಸುತ್ತಿದ್ದಾರೆ. ಆದರೆ ಗ್ರಾಹಕರು ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ಜೂಸ್ ಅಂಗಡಿ ರಾಣಿ ಡಾ ಬಾಗ್‌ನಲ್ಲಿದೆ. ಉಪ್ಪಲ್ ನ್ಯೂರೋ ಆಸ್ಪತ್ರೆಯ ಬಳಿ. ದಯವಿಟ್ಟು ಅವರ ಸ್ಟಾಲ್‌ಗೆ ಭೇಟಿ ನೀಡಿ. ಸ್ವಲ್ಪ ಹಣ ಸಂಪಾದಿಸಲು ಅವರಿಗೆ ಸಹಾಯ ಮಾಡಿ" ಎಂದು ಕೇಳಿಕೊಂಡಿದ್ದಾರೆ.

Edited By : Nagesh Gaonkar
PublicNext

PublicNext

29/07/2021 03:46 pm

Cinque Terre

70.9 K

Cinque Terre

1