ಲಖನೌ : ಅಲ್ಲಿ ತಾಳಿಕಟ್ಟಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಆದ್ರೆ ಮದುಮಗ ನಾಪತ್ತೆ ಆದ್ರೆ ಆ ಮದುಮಗ ಮಾಡಿದ ಕಾರ್ಯ ಇಂದು ಒಂದು ಜೀವ ಉಳಿಯಲು ಸಹಕಾರಿಯಾಗಿದೆ. ಅಷ್ಟಕ್ಕೂ ಆ ಮದುಮಗ ಮಾಡಿದ್ದಾದರೂ ಏನು ಅಂತಿರಾ? ಇಲ್ಲಿದೆ ನೋಡಿ ಶ್ರೇಷ್ಠ ದಾನಗಳಲ್ಲಿ ಈ ರಕ್ತದಾನವು ಒಂದು ಸೂಕ್ತ ಸಮಯದಲ್ಲಿ ರಕ್ತ ಸಿಗದೇ ಎಷ್ಟೋ ಮಂದಿ ಮೃತಪಡುವುದು ಇದೆ. ರಕ್ತದಾನದ ಬಗ್ಗೆ ಅನೇಕ ರೀತಿಯಲ್ಲಿ ಜಾಗೃತಿ ಮೂಡಿಸುತ್ತಿದ್ದರೂ ಹಲವರಿಗೆ ರಕ್ತ ನೀಡಿದರೆ ತಮ್ಮ ಜೀವಕ್ಕೆ ಅಪಾಯ ಆಗಬಹುದು ಎಂಬ ತಪ್ಪು ಕಲ್ಪನೆಯೂ ಇದೆ.
ಆದರೆ ಇಲ್ಲೊಬ್ಬ ಮದುಮಗ ಮದುವೆಯ ದಿನವೇ ಬಾಲಕಿಯೊಬ್ಬಳ ಜೀವ ಉಳಿಸಿ ನಂತರ ಮಂಟಪಕ್ಕೆ ಬಂದು ಮದುವೆ ಕಾರ್ಯ ಮುಗಿಸಿದ್ದಾನೆ. ಉತ್ತರ ಪ್ರದೇಶದ ಪೊಲೀಸ್ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಆಶೀಶ್ ಕುಮಾರ್ ಮಿಶ್ರಾ ಅವರ ವಿವಾಹ ನಿನ್ನೆ ಇತ್ತು. ಮದುಮಗನ ಡ್ರೆಸ್ ಮಾಡಿಕೊಂಡು ಇನ್ನೇನು ಮಂಟಪಕ್ಕೆ ಹೋಗಬೇಕು ಎನ್ನುವಷ್ಟದಲ್ಲಿ ಒಬ್ಬ ಬಾಲಕಿಗೆ ರಕ್ತದಾನದ ಅವಶ್ಯಕತೆ ಇರುವುದು ತಿಳಿಯಿತು. ಆದರೆ ಆಕೆಗೆ ರಕ್ತ ಕೊಡಲು ಯಾರೊಬ್ಬರೂ ಮುಂದೆ ಬಂದಿರಲಿಲ್ಲ.
ಈ ಹಿನ್ನೆಲೆಯಲ್ಲಿ, ಮಂಟಪಕ್ಕೆ ಹೋಗುವ ಮೊದಲು ಆಶೀಶ್ ಆಸ್ಪತ್ರೆಗೆ ತೆರಳಿ ರಕ್ತದಾನ ಮಾಡಿ ಬಾಲಕಿಯ ಜೀವ ಉಳಿಸಿ ನಂತರ ಮದುವೆಯಾಗಿದ್ದಾನೆ. ಮದುಮಗಳು ಕೂಡ ತನ್ನ ಭಾವಿ ಪತಿಯನ್ನು ನೋಡಲು ಆಸ್ಪತ್ರೆಗೆ ಧಾವಿಸಿದ್ದಾಳೆ. ನಂತರ ಈ ವಿಷಯವನ್ನು ಆಶೀಶ್ ತಮ್ಮ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ. ಪೊಲೀಸ್ ಇಲಾಖೆ ಕೂಡ ಆಶೀಶ್ ಕಾರ್ಯವನ್ನು ಶ್ಲಾಘಿಸಿ ಟ್ವೀಟ್ ಮಾಡಿದೆ.ಅನೇಕ ಮಂದಿ ಮೆಚ್ಚುಗೆ ಸೂಸಿದ್ದಾರೆ.
PublicNext
23/02/2021 12:22 pm