ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೆಹಲಿ: ಕ್ರಿಕೆಟಿಗ, ಸಂಸದ ಗೌತಮ್ ಗಂಭೀರ್ ಕ್ಯಾಂಟೀನ್ ನಲ್ಲಿ 1 ರೂ. ಗೆ ಸವಿಯೂಟ!

ದೆಹಲಿ: ಟೀಂ ಇಂಡಿಯಾ ಮಾಜಿ ಸ್ಟಾರ್ ಕ್ರಿಕೆಟಿಗ, ದೆಹಲಿಯ ಬಿಜೆಪಿ ಸಂಸದ ಗೌತಮ್ ಗಂಭೀರ್ ಅವರು ಪೂರ್ವ ದೆಹಲಿಯ ಗಾಂಧಿನಗರದಲ್ಲಿ ಕಳೆದ ವರ್ಷ ಆರಂಭಿಸಿರುವ 1 ರೂ. ಊಟದ ಕ್ಯಾಂಟೀನ್ ಈಗಲೂ ಬಹು ಚೆನ್ನಾಗಿಯೇ ನಡೆಯುತ್ತಿದೆ.

ಇದು ದೇಶದಲ್ಲಿರುವ ಅತಿ ಕಡಿಮೆ ಬೆಲೆಯಲ್ಲಿ ಆಹಾರ ಸಿಗುವ ಕ್ಯಾಂಟೀನ್ ಅನ್ನೋ ಹೆಗ್ಗಳಿಗೆ ಪಾತ್ರವಾಗಿದೆ.

'ಜನ ರಸೋಯಿ' ಎಂಬ ಹೆಸರಿನಲ್ಲಿ ಈ ಕ್ಯಾಂಟೀನ್ ನ್ನು ಕಳೆದ ವರ್ಷ ಡಿಸೆಂಬರ್ ನಲ್ಲಿ ಗಂಭೀರ್ ಆರಂಭಿಸಿದ್ದರು.

ತಮ್ಮ ಸಂಸದೀಯ ಕ್ಷೇತ್ರದ 10 ಅಸೆಂಬ್ಲಿಯಲ್ಲಿಯೂ ತಲಾ ಒಂದೊಂದು 'ಜನ ರಸೋಯಿ' ಕ್ಯಾಂಟೀನ್ ಆರಂಭಿಸಲು ಗೌತಮ್ ಗಂಭೀರ್ ಹಿಂದಿನ ವರ್ಷವೇ ಯೋಜನೆ ಹಾಕಿಕೊಂಡಿದ್ದರು.

ಗಾಂಧಿ ನಗರದ ಈ ಕ್ಯಾಂಟೀನ್ (ಹೊಟೇಲ್) ನಲ್ಲಿ ಒಮ್ಮೆಗೆ 100 ಮಂದಿ ಊಟ ಮಾಡಬಹುದಾಗಿದೆ. ಈ ಕ್ಯಾಂಟೀನ್‌ಗೆ ಸರಕಾರದಿಂದ ಯಾವುದೇ ಹಣ ಪಡೆಯುತ್ತಿಲ್ಲ. ಗೌತಮ್ ಗಂಭೀರ್ ಅವರ ವೈಯಕ್ತಿಕ ಹಣ ಹಾಗೂ 'ಗಂಭೀರ್ ಫೌಂಡೇಶನ್' ಈ ಕ್ಯಾಂಟೀನ್ ಉಸ್ತುವಾರಿ ನೋಡಿಕೊಳ್ಳುತ್ತಿದೆ.

Edited By : Manjunath H D
PublicNext

PublicNext

21/02/2021 01:13 pm

Cinque Terre

63.9 K

Cinque Terre

4