ಮುಂಬೈ : ಸಾಧಿಸುವೆನೆಂಬುವ ಛಲವೊಂದು ಜೊತೆಗಿದ್ದರೆ ಯಾವುದು ಅಸಾಧ್ಯವಲ್ಲ ಎನ್ನುವುದನ್ನು ಆಟೋ ಚಾಲಕರ ಪುತ್ರಿಯೋರ್ವಳು ಸಾಧಿಸಿ ತೋರಿಸಿದ್ದಾರೆ. ಮಿಸ್ ಇಂಡಿಯಾ 2020ರ ರನ್ನರ್ ಅಪ್ ಪ್ರಶಸ್ತಿಗೆ ಭಾಜನರಾದ ಉತ್ತರ ಪ್ರದೇಶದ ದೇವರಿಯಾ ನಿವಾಸಿ ಮಾನ್ಯಾ ಸಿಂಗ್ ತಾನು ಬೆಳೆದುಬಂದ ದಾರಿಯನ್ನು ಮರೆಯದೆ ಮುನ್ನುಗ್ಗಿ ಸುದ್ದಿಯಾಗಿದ್ದಾರೆ.
ಮನುಷ್ಯ ಒಂದು ಹಂತಕ್ಕೆ ಬಂದ ಮೇಲೆ ತನ್ನ ಭೂತಕಾಲದ ಘಟನೆಗಳನ್ನು ಮರೆಯುವವರೆ ಹೆಚ್ಚು ಆದರೆ ಮಾನ್ಯಾ ಸಿಂಗ್ ಮಾತ್ರ ತಮ್ಮ ಕಷ್ಟದ ದಿನಗಳ ಮರೆತ್ತಿಲ್ಲ ಎನ್ನುವುದಕ್ಕೆ ಅವರು ಪ್ರಶಸ್ತಿ ಪಡೆದಯಲು ಬಂದ ಪರಿಯೇ ಸಾಕ್ಷಿ..ಹೌದು ಮಾನ್ಯ ತನ್ನ ತಂದೆಯ ಆಟೋ ರಿಕ್ಷಾದಲ್ಲಿ ಮುಂಬೈನಲ್ಲಿ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮಕ್ಕೆ ಆಗಮಿಸಿ ಕಷ್ಟದ ದಿನಗಳನ್ನು ಮೆಲಕು ಹಾಕಿದ್ದಾರೆ. ಮುಂಬೈನ ಠಾಕೂರ್ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಮಾನ್ಯಾರವರ ತಂದೆ ತಾಯಿಯನ್ನೂ ಸನ್ಮಾನಿಸಿದ್ದಾರೆ.
ಆಟೋ ಹಿಂದಿನ ಸೀಟಿನಲ್ಲಿ ಮಾನ್ಯಾ ಹಾಗೂ ಆಕೆಯ ತಾಯಿ ಕುಳಿತುಕೊಂಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಈ ಪೋಟೋ ಭಾರೀ ವೈರಲ್ ಆಗಿದೆ.
ಓರ್ವ ಆಟೋ ಚಾಲಕನ ಮಗಳಾಗಿರುವ ಮಾನ್ಯಾ ಮಿಸ್ ಇಂಡಿಯಾ 2020ರ ರನ್ನರ್ ಅಪ್ ಕೂಡಾ ಆಗಿದ್ದಾರೆ. ಮಾನ್ಯಾ ತಾವು ನಡೆದು ಬಂದ ಹಾದಿಯನ್ನು ನೆನಪಿಸಿಕೊಂಡಿದ್ದಾರೆ. ತಾನು ಈ ಕ್ಷೇತ್ರ ಆಯ್ಕೆ ಮಾಡಿಕೊಳ್ಳುತ್ತೇನೆ ಎನ್ನುವಾಗ ತಂದೆ ತಾಯಿ ನಮ್ಮಂತಹವರು ಕನಸು ಕಾಣುವುದಕ್ಕೆ ಮಾತ್ರ ಸೀಮಿತ ಆದರೆ ನೀನು ಮಿಸ್ ಇಂಡಿಯಾ ಆಗುವ ಬಗ್ಗೆ ಯೋಚಿಸುತ್ತಿದ್ದೀಯಲ್ಲಾ? ಎಂದು ಪ್ರಶ್ನಿಸಿದ್ದರು ಎಂದಿದ್ದಾರೆ. ಛಲ ಬಿಡದ ಮಾನ್ಯ ಸಾಧನೆಯ ಮೂಲಕ ಹೆತ್ತವರ ಕೀರ್ತಿ ಹೆಚ್ಚಿಸುವುದರೊಂದಿಗೆ ಇತರರಿಗೆ ಸ್ಪೂರ್ತಿಯಾಗಿದ್ದಾರೆ.
PublicNext
17/02/2021 11:13 pm