ಮಂಡ್ಯ,: ಕೆಲವೊಮ್ಮೆ ನಿರೀಕ್ಷೆಯೇ ಇರದಿರುವ ಘಟನೆಗಳು ನಡೆದಾಗ ನಿಜಕ್ಕೂ ಇದು ಲಕ್ ಅನಿಸುತ್ತದೆ ಎನ್ನುವ ಮಾತಿಗೆ ಇಲ್ಲೊಂದು ಬೇಸ್ಟ್ ಉದಾಹರಣೆ ಇದೆ ನೋಡಿ.. ಮದ್ದೂರು ತಾಲೂಕು ಸೋಮನಹಳ್ಳಿಯ ಉದ್ಯಮಿಯೊಬ್ಬರ ಪುತ್ರ ಸೋಹನ್ ಬಲರಾಂ ಕೇರಳದಲ್ಲಿ 100 ರೂ.ಗೆ ತೆಗೆದುಕೊಂಡಿದ್ದ ಲಾಟರಿ ಟಿಕೆಟ್ ಗೆ 1 ಕೋಟಿ ರೂ. ಬಹುಮಾನ ಬಂದಿದೆ.
ಸೋಹನ್ ಕುಟುಂಬದವರು ಕೇರಳದ ಗೆಳೆಯರೊಬ್ಬರ ಮದುವೆಗೆ ಹೋಗಿ ವಾಪಸ್ ಬರುವಾಗ ಮಾರ್ಗಮಧ್ಯೆ ಪುಥನಾಥಿ ಎಂಬಲ್ಲಿ ಸೋಹನ್ ಫೇಸ್ ಬುಕ್ ಗೆಳೆಯನ ಬಳಿಗೆ ತೆರಳಿದ್ದರು. ಸೋಹನ್ ಗೆಳೆಯ ಲಾಟರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲಿಗೆ ತೆರಳಿದ್ದ ಸೋಹನ್ ಮತ್ತು ಮತ್ತೊಬ್ಬರು ತಲಾ 100 ರೂ. ಕೊಟ್ಟು ಲಾಟರಿ ಟಿಕೆಟ್ ಕೊಂಡುಕೊಂಡಿದ್ದರು. ಅದೃಷ್ಟವಶಾತ್ ಸೋಹನ್ ಖರೀದಿಸಿದ್ದ ಲಾಟರಿ ಟಿಕೆಟ್ ಗೆ 1 ಕೋಟಿ ರೂ. ಬಂಪರ್ ಬಹುಮಾನ ಬಂದಿದೆ. ಲಕ್ ಅಂದ್ರೆ ಇದೇ ಅಲ್ವಾ?
PublicNext
10/02/2021 07:27 am