ವಾಷಿಂಗ್ಟನ್: 2010ರ ಸುಮಾರಿನಲ್ಲಿ ಡಬ್ಲ್ಯೂಡಬ್ಲ್ಯೂಇ ನೋಡುತ್ತಿದ್ದವರಿಗೆ ಗಬ್ಬಿ ಟಫ್ಟ್ ಎಂಬ ಆಟಗಾರ ಗೊತ್ತೇ ಇರ್ತಾರೆ. ಆತ ಗೇಬ್ ಟೆಫ್ಟ್ ಎಂದು ಹೆಸರಾಗಿದ್ದರು. ಆದ್ರೆ ಈಗ ಇದ್ದಕ್ಕಿದ್ದಂತೆ ಅವರು ಮತ್ತೆ ಪ್ರಚಾರದಲ್ಲಿದ್ದಾರೆ. ಕಾರಣ ಅವರು ಈಗ ಮಂಗಳಮುಖಿಯಾಗಿ ಬದಲಾಗಿದ್ದಾರೆ.
ನಿಜ. ನಿಮಗೆ ಅಚ್ಚರಿಯಾಗಬಹುದು. ಆದ್ರೂ ಇದು ಸತ್ಯ. ಸುಮಾರು ವರ್ಷಗಳ ಕಾಲ ಗಬ್ಬಿ ಟಫ್ಟ್ ಅವರು ಈ ವಿಚಾರವನ್ನು ಗುಟ್ಟಾಗಿ ಇರಿಸಿದ್ದರು. ಈಗ ಹೊರ ಜಗತ್ತಿಗೆ ತಮ್ಮನ್ನು ತಾವು ತೆರೆದುಕೊಂಡಿದ್ದಾರೆ. 2012ರಲ್ಲಿ ಕ್ಷೇತ್ರವನ್ನು ತ್ಯಜಿಸಿದ್ದ ಅವರು ಅದಕ್ಕಿಂದ ಒಂದು ವರ್ಷ ಮುನ್ನ ಹೆಣ್ಣು ಮಗುವಿನ ತಂದೆಯಾಗಿದ್ದರು.
10 ವಯಸ್ಸಿನ ಬಾಲಕನಾಗಿದ್ದಾಗ ಅವರಿಗೆ ಹೆಣ್ಣು ಮಕ್ಕಳ ಬಗ್ಗೆ ಆಸಕ್ತಿ ಇತ್ತಂತೆ. ಆಗ ಹೆಣ್ಣಿನ ಉಡುಗೆ ತೊಟ್ಟು ಖುಷಿಪಡುತ್ತಿದ್ದರಂತೆ. ಆ ರೀತಿ ಇರುವುದೇ ಅವರಿಗೆ ಹೆಚ್ಚು ಸೂಕ್ತ ಎನಿಸುತ್ತಿತ್ತಂತೆ. ಹೀಗಂತಾ ಅವರೇ ಹೇಳಿದ್ದಾರೆ.
PublicNext
08/02/2021 01:31 pm