ಬೀಜಿಂಗ್: ನನ್ನ ಹಳೆಯ ಗೆಳತಿ ಬರೀ ಮೊಬೈಲ್ ಫೋನ್ ನೋಡುತ್ತ ನನ್ನ ಕಡೆ ಗಮನ ಹರಿಸುತ್ತಲೇ ಇರಲಿಲ್ಲ. ಏನಾದರೊಂದು ಕೊಡಿಸುವಂತೆ ಸದಾ ಪೀಡಿಸುತ್ತಿದ್ದಳು. ಹೀಗಾಗಿ ಆಕೆಯನ್ನು ಬಿಟ್ಟು ಸೆಕ್ಸ್ ಡಾಲ್ ಖರೀದಿಸಿದ್ದೇನೆ.
ಹೀಗಂತಾ ಸೆಕ್ಸ್ ಡಾಲ್ ಜೊತೆ ಸಂಸಾರ ಹೂಡಿರುವ ಚೀನಾ ದೇಶದ ಹಾಂಕಾಂಗ್ ನಗರದ ನಿವಾಸಿ ಕ್ಸಿ ಟಿಯನ್ ರಾಂಗ್ (35) ಎಂಬಾತ ಹೇಳಿದ್ದಾನೆ. ಈಗಾಗಲೇ ಸೆಕ್ಸ್ ಡಾಲ್ ಜೊತೆ ಈತ ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆ. ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಆತನ ಕುಟುಂಬಸ್ಥರು ಹಾಗೂ ಸ್ನೇಹಿತರು ಕೂಡ ಭಾಗಿಯಾಗಿದ್ದಾರೆ.
ನಾನು ನನ್ನ ಗೊಂಬೆ ಗೆಳತಿಯನ್ನು ಅಪಾರವಾಗಿ ಪ್ರೀತಿಸುತ್ತೇನೆ. ಆದರೆ ಆಕೆಯೊಂದಿಗೆ ಇದುವರೆಗೂ ದೈಹಿಕ ಸಂಪರ್ಕ ಹೊಂದಿಲ್ಲ. ಕಿಸ್ ಕೂಡ ಮಾಡಿಲ್ಲ. ಅಂತರ್ಜಾಲ ಮಾರುಕಟ್ಟೆಯಲ್ಲಿ ಈ ಗೊಂಬೆ ಗೆಳತಿಯನ್ನು 10 ಸಾವಿರ ಯುವಾನ್(11ವರೆ ಲಕ್ಷ) ಕೊಟ್ಟು ಖರೀದಿಸಿದ್ದೇನೆ. ದಿನವೂ ಆಕೆಗೆ ಒದ್ದೆ ಬಟ್ಟೆಯಿಂದ ಸ್ನಾನ ಮಾಡಿಸುತ್ತೇನೆ. ಟಾಲ್ಕಮ್ ಪೌಡರ್ ಹಾಕುತ್ತೇನೆ. ಆಕೆಗೆ ಮೋಚಿ ಎಂದು ಹೆಸರಿಟ್ಟಿದ್ದೇನೆ. ನಾನು ಮಲಗಿದಾಗ ಆಕೆ ನನ್ನ ಎದುರು ಕುರ್ಚಿಯಲ್ಲಿ ಕೂತಿರುತ್ತಾಳೆ ಎಂದು ಕ್ಸಿ ಹೇಳಿದ್ದಾನೆ.
PublicNext
30/01/2021 05:44 pm