ಬೆಂಗಳೂರು: ಸೆಗಣಿ ತಿಂದಿದ್ದನ್ನು ವರ್ಣಿಸಿ ಅಮೆಜಾನ್ ಬಳಕೆದಾರನೋರ್ವ ಟ್ರೋಲ್ ಆಗಿದ್ದಾನೆ.
ಹೌದು. ಅಮೆಜಾನ್ ಶಾಪಿಂಗ್‌ನಲ್ಲಿ ಶುದ್ಧ ದನದ ಸೆಗಣಿಯ ಬೆರಣಿ ಲಭ್ಯವಿದ್ದು, 600 ರೂ. ಬೆಲೆ ಹೊಂದಿದೆ. ಆದರೆ ಆಫರ್ ದರದಲ್ಲಿ 299 ರೂ. ದರಕ್ಕೆ ಲಭ್ಯವಿದೆ. ಆದರೆ ಉತ್ಪನ್ನದ ಹೆಸರು ಮಾತ್ರ ಒರಿಜಿನಲ್ ಹೋಲಿ ಕೌ ಡಂಗ್ ಕೇಕ್ ಎಂದಿದೆ. ಇದನ್ನು ಗಮನಿಸಿದ ಬಳಕೆದಾರನೋರ್ವ, ತಿನ್ನುವ ಕೇಕ್ ಎಂದು ಭಾವಿಸಿ ಖರೀದಿಸಿದ್ದಾನೆ. ಬಳಿಕ ಅದನ್ನು ತಿಂದು ಮಾಡಿದ ಕಾಮೆಂಟ್ ವೈರಲ್ ಆಗಿದೆ.
''ಇದನ್ನು ನಾನು ತಿಂದಾಗ ಅದರ ರುಚಿ ತುಂಬಾ ಕೆಟ್ಟದಾಗಿತ್ತು. ಅದು ಹುಲ್ಲಿನಂತಿದ್ದು, ಅದರಲ್ಲಿ ಮಣ್ಣಿನ ಸ್ವಾದವಿತ್ತು. ತಿಂದಾದ ಬಳಿಕ ಹೊಟ್ಟೆ ಕೆಟ್ಟುಹೋಯಿತು. ಅದನ್ನು ತಯಾರಿಸುವಾಗ ಸ್ವಲ್ಪ ಶುದ್ಧತೆ ಕಡೆ ಗಮನ ಕೊಡಿ. ಅಷ್ಟೇ ಅಲ್ಲದೆ ರುಚಿ ಮತ್ತು ಕುರುಕುರು ಅನ್ನಿಸುವಂತೆ ತಯಾರಿಸಿ'' ಎನ್ನುವ ಸಲಹೆ ನೀಡಿದ್ದಾನೆ.
ಈ ಕಮೆಂಟ್ ವೈರಲ್ ಆಗಿದ್ದು, ಅತ್ಯಂತ ಹೆಚ್ಚಿನ ಸಂಖ್ಯೆಯ ಜನರು ಅದಕ್ಕೆ ಸಹಮತ ಸೂಚಿಸಿದ್ದಾರೆ. ದನದ ಸೆಗಣಿಗೆ ಕೌ ಡಂಗ್ ಎಂದೂ, ಸೆಗಣಿಯಲ್ಲಿ ತಯಾರಿಸಿದ ಬೆರಣಿಗೆ ಕೇಕ್ ಎಂದೂ ಹೇಳಲಾಗುತ್ತದೆ. ಇದರಿಂದ ಆತ ಗೊಂದಲಕ್ಕೆ ಒಳಗಾಗಿದ್ದಾನೆ ಎನ್ನಲಾಗಿದೆ.
PublicNext
21/01/2021 08:07 pm