ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉದ್ಯೋಗಿಯ ಯೋಗಕ್ಷಮ ವಿಚಾರಿಸಲು ಮನೆಗೆ ಬಂದ ಟಾಟಾ : ಬಾಸ್ ಮತ್ತು ಉದ್ಯೋಗಿಯ ಸಂಬಂಧ ಹೀಗಿರಬೇಕೆಂದ ನೆಟ್ಟಿಗರು

ಮುಂಬಯಿ: ಒಂದು ಕಂಪನಿ ದೊಡ್ಡ ಮಟ್ಟದಲ್ಲಿ ಮಿಂಚಲು ಅಲ್ಲಿಯ ಉದ್ಯೋಗಿಗಳೇ ಕಾರಣ.

ಸಂಸ್ಥೆ ಕಟ್ಟುವುದು ಮುಖ್ಯವಲ್ಲ ಅದನ್ನು ಬೆಳೆಸುವುದು ಅತೀ ಮುಖ್ಯ ಆ ಸಾಲಿನಲ್ಲಿ ಮೊದಲಿಗೆ ಬರುವವರೇ ಉದ್ಯೋಗಿಗಳು.

ಯಾವ ಕಂಪನಿ ತನ್ನ ಉದ್ಯೋಗಿಗಳನ್ನು ಪ್ರೀತಿಸುತ್ತದೆಯೋ ಆ ಕಂಪನಿ ಉತ್ತುಂಗಕ್ಕೇರುತ್ತದೆ ಅದಕ್ಕೆ ಸಂಶಯವೇ ಇಲ್ಲ.

ಸದ್ಯ ಟಾಟಾ ಸಮೂಹದ ಮಾಜಿ ಅಧ್ಯಕ್ಷ ರತನ್ ಟಾಟಾ ಅವರು ಕಂಪನಿಯ ಮಾಜಿ ಉದ್ಯೋಗಿಯೊಬ್ಬರ ಯೋಗಕ್ಷೇಮವನ್ನು ವಿಚಾರಿಸಲು ಮುಂಬಯಿನಿಂದ ಪುಣೆಗೆ ತೆರಳಿರುವ ಸಂಗತಿ ಎಲ್ಲರ ಗಮನ ಸೆಳೆದಿದೆ.

ಈ ಘಟನೆಯಿಂದಾಗಿ ಬಾಸ್ ಮತ್ತು ಉದ್ಯೋಗಿಯ ಸಂಬಂಧದ ಬಗ್ಗೆ ಚರ್ಚೆಗಳು ಆರಂಭಗೊಂಡಿವೆ.

ಪುಣೆಯ ನಿವಾಸಿ ಯೋಗೇಶ್ ದೇಸಾಯಿ ಅವರು ಕಳೆದ ಎರಡು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಸಂಸ್ಥೆಯನ್ನು ತ್ಯಜಿಸಿದ್ದರು.

ಇದೀಗ ರತನ್ ಟಾಟಾ ಅವರು ತಮ್ಮನ್ನು ಭೇಟಿಯಾಗಿ ಕುಟುಂಬದ ಯೋಗಕ್ಷೇಮವನ್ನು ವಿಚಾರಿಸಿದ ಸಂಗತಿಯನ್ನು ಲಿಂಕ್ ಡಿನ್ ನಲ್ಲಿ ಯೋಗೇಶ್ ದೇಸಾಯಿ ಪೋಸ್ಟ್ ಮಾಡಿದ್ದರು.

ಇದು ಜನರ ಗಮನ ಸೆಳೆದಿದೆ.

ರತನ್ ಟಾಟಾ ಅವರಿಗೆ ಈಗ 83 ವರ್ಷ ವಯಸ್ಸು. ಈ ಇಳಿ ವಯಸ್ಸಿನಲ್ಲಿ ಮಾಜಿ ಉದ್ಯೋಗಿಯ ಸೌಖ್ಯ ವಿಚಾರಿಸಲು ತೆರಳಿದ ಅವರ ಹೃದಯ ವೈಶಾಲ್ಯತೆಯನ್ನು ನೆಟ್ಟಿಗರು ಫಿದಾ ಆಗಿದ್ದಾರೆ.

''ಹಣ, ಆಸ್ತಿ ಅಂತಸ್ತಿಗಿಂತಲೂ ಮಾನವೀಯತೆ ದೊಡ್ಡದು.

ಅಂಥ ಮಾನವೀಯತೆಯೇ ಮೂರ್ತಿವೆತ್ತಂತಿರುವ ರತನ್ ಟಾಟಾ ಗೌರವಾರ್ಹರು,'' ಎಂದು ಟ್ವಿಟರ್ ನಲ್ಲಿ ನೆಟ್ಟಿಗರು ಟಾಟಾ ನಡೆಯನ್ನು ಶ್ಲಾಘಿಸಿದ್ದಾರೆ.

Edited By : Nirmala Aralikatti
PublicNext

PublicNext

06/01/2021 09:15 am

Cinque Terre

91.66 K

Cinque Terre

41

ಸಂಬಂಧಿತ ಸುದ್ದಿ