ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸ ಮನೆಯಲ್ಲಿ ಹೂವು ಹಾಸಿ ತಾಯಿಗೆ ಅದ್ಧೂರಿ ಸ್ವಾಗತ: ಅಮ್ಮನ ಕಣ್ಣಲ್ಲಿ ಖುಷಿಯ ಕಣ್ಣೀರು

ಅಮ್ಮ ಎಂದರೆ ಸಹನಾ ಸಾಗರ. ಮಮತೆಯ ಮಾಮರ. ಮಕ್ಕಳ ಏಳ್ಗೆಗಾಗಿ ತನ್ನ ಸರ್ವಸ್ವವನ್ನೂ ತ್ಯಾಗ ಮಾಡುವ ಆಕೆಯನ್ನು ಖುಷಿ ಪಡಿಸುವುದು ಮಕ್ಕಳ ಕರ್ತವ್ಯ‌. ಅದರಂತೆ ಹೊಸ ಮನೆಯ ಪ್ರವೇಶಕ್ಕೆ ತಾಯಿಯನ್ನು ಕರೆತಂದು ಆ ಮೂಲಕವೇ ಗೃಹ ಪ್ರವೇಶ ನೆರವೇರಿಸಲಾಗಿದೆ.

ಈ ವಿಡಿಯೋ ಈಗ ಎಲ್ಲರ ಹೃದಯ ಮುಟ್ಟಿದೆ‌. ಹೊಸ ಮನೆಯಲ್ಲಿ ಹೂವಿನ ಹಾದಿ ಮಾಡಿದ ಕುಟುಂಬಸ್ಥರು ಅದರ ಮೇಲೆ ಅಮ್ಮನನ್ನು ನಡೆಸಿ ಸಂಭ್ರಮಿಸಿದ್ದಾರೆ. ಆನಂದ ಬಾಷ್ಪ ಸುರಿಸುತ್ತ ಒಳಬಂದ ತಾಯಿ, ಮನೆಯ ಗೋಡೆಗೆ ನೇತಾಕಿದ್ದ ಅಗಲಿದ ಪತಿಯ ಭಾವಚಿತ್ರ ಕಂಡು ಮತ್ತಷ್ಟು ಭಾವುಕರಾಗಿದ್ದಾರೆ.

ಹೃದಯಸ್ಪರ್ಶಿಯಾದ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಹಾಗೂ ಹೆತ್ತವರನ್ನು ತಾತ್ಸಾರದಿಂದ ಕಾಣುವ ಮಕ್ಕಳಿಗೆ ಪಾಠ ಕಲಿಸಿದೆ.

Edited By : Nagaraj Tulugeri
PublicNext

PublicNext

13/06/2022 03:31 pm

Cinque Terre

41.41 K

Cinque Terre

2