ಬೀಡ್: ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ನಡೆದ ವಿಚಿತ್ರ ಮದುವೆಯ ವಿಡಿಯೋ ವೈರಲ್ ಆಗಿದೆ. ವಧು ವರನ ಕೊರಳಿಗೆ ಹಾವನ್ನು ಹಾಕಿದ್ದಾಳೆ. ನಂತರ ವರನು ವಧುವಿನ ಕೊರಳಿಗೆ ಹೆಬ್ಬಾವನ್ನೇ ಎತ್ತಿ ಹಾಕಿದ್ದಾನೆ. ನೆರೆದಿದ್ದ ಜನ ನವಜೋಡಿಗೆ ಶುಭಕೋರಿದ್ದಾರೆ.
ಅಚ್ಚರಿ ಎಂದರೆ ಇವರಿಬ್ಬರೂ ವನ್ಯಜೀವಿ ಇಲಾಖೆಯ ನೌಕರರು ಎಂಬ ಮಾಹಿತಿ ಇದೆ. ಎರಡು ವರ್ಷಗಳ ಹಿಂದೆ ನಡೆದ ಮದುವೆ ಇದು ಎನ್ನಲಾಗಿದ್ದು ಈಗ ಇದು ವೈರಲ್ ಆಗುತ್ತಿದೆ. ಕೆಲವರು ಈ ವಿಡಿಯೋವನ್ನು ಟ್ರೋಲ್ ಕೂಡ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇದನ್ನು ಕಂಡ ನೆಟ್ಟಿಗರು ಇದೆಂಥ ಭಂಡ ಧೈರ್ಯ? ಎಂದು ಥರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.
PublicNext
30/05/2022 03:33 pm