ಹೈದರಾಬಾದ್: ಮಹಿಳೆಯೊಬ್ಬರು ತಮ್ಮ ಪುಟ್ಟ ಕಂದಮ್ಮನನ್ನು ಎತ್ತಿಕೊಂಡು ಹೈದರಾಬಾದ್ ಮೆಟ್ರೋದಲ್ಲಿ ಕೆಳಗೆ ಕುಳಿತು ಪ್ರಯಾಣಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹಿಳೆಗೆ ಸೀಟ್ ಬಿಟ್ಟುಕೊಡದೆ ಮಾನವೀಯತೆ ಮರೆತ ಯುವತಿಯರು, ಮಹಿಳೆಯರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ.
ಇದೀಗ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಅವರು ಕೂಡಾ ಪ್ರತಿಕ್ರಿಯಿಸಿದ್ದಾರೆ. "ನಾವು ಎಷ್ಟೇ ಮೇಧಾವಿಗಳಾಗಿರಬಹುದು, ಅತಿಯಾದ ವಿದ್ಯಾವಂತರೂ ಆಗಿರಬಹುದು, ಶ್ರೀಮಂತರೂ ಆಗಿರಬಹುದು. ಆದರೆ ಇಷ್ಟೆಲ್ಲ ಇದ್ದೂ ಸಾಮಾನ್ಯಜ್ಞಾನ ಇಲ್ಲವೆಂದಾದರೆ ವಿದ್ಯೆ, ಶ್ರೀಮಂತಿಕೆಗೆ ಯಾವುದೇ ಬೆಲೆ ಇರೋಲ್ಲ. ನಮ್ಮ ಮನೆ ಹಿರಿಯರು ಅಥವಾ ನಮ್ಮ ಮನೆಯಲ್ಲಿ ಚಿಕ್ಕಮಗು ಇರುವಂತವರು ಪ್ರಯಾಣಿಸುವಾಗ ನಮ್ಮೆದುರು ಬಂದರೆ ಅವರಿಗೆ ನಾವು ಕುಳಿತುಕೊಳ್ಳಲು ಆಸನ ಬಿಟ್ಟು ಕೊಡುತ್ತೇವೆ. ಆದರೆ ಬೇರೆ ಯಾರಾದರೂ ಬಂದರೆ ಅವರು ಹಿರಿಯರೇ ಆಗಿರಲಿ ಅಥವಾ ನಿಲ್ಲಲು ಅಶಕ್ತರೇ ಆಗಿರಲಿ ಅವರಿಗೆ ಆಸನ ನೀಡುವುದಿಲ್ಲ. ನಮ್ಮ ಆಲೋಚನೆ ಬದಲಾಗಲೇಬೇಕು. ಎಲ್ಲರೂ ನಮ್ಮವರೇ ಎಂದು ಯೋಚಿಸಬೇಕು. ಇಂತಹ ಚಿಕ್ಕಪುಟ್ಟ ಸಹಾಯವನ್ನು ಮಾಡಲೇಬೇಕು' ಎಂದು ಉತ್ತರ ಕನ್ನಡದ ಶಿರಸಿ ನಿವಾಸಿ ಪ್ರಜ್ವಲ್ ಆರ್.ನಾಯ್ಕ ಮಾಳಂಜಿ ಬರೆದಿರುವ ಲೇಖನದ ಜೊತೆ ಮಹಿಳೆಯ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
PublicNext
28/10/2021 06:20 pm