ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಾಳಿಯಲ್ಲಿ ಹಾರಿದ ನೋಟು ಅಜ್ಜಿಯ ಜೀವನವನ್ನೇ ಬದಲಿಸಿತು!

ತಿರುವನಂತಪುರಂ: ನಮ್ಮ ಮುಪ್ಪಿನಲ್ಲಿ ನಾಲ್ಕು ಕಾಸು ಇರಲಿ ಅಂತ ಬ್ಯಾಂಕ್‌ನಲ್ಲಿ ಖಾತೆ ತೆಗೆದು ಇಡುತ್ತೇವೆ. ಆದ್ರೆ ಇದರ ಬಗ್ಗೆ ಮಾಹಿತಿ ಇಲ್ಲದ ಅಜ್ಜಿಯೊಬ್ಬಳ ಜೀವನವನ್ನು ಗಾಳಿಯಲ್ಲಿ ಹಾರಿ ಬಂದ ನೋಟು ಬದಲಾಯಿಸಿದೆ.

ಈ ಪ್ರಸಂಗ ನೆಡೆದಿರುವುದು ನೆರೆಯ ರಾಜ್ಯ ಕೇರಳದ ಪಲಕ್ಕಾಡ್​ ಜಿಲ್ಲೆಯ ಕೊಟ್ಟಾಯಿಯ ಮೈದಾನದಲ್ಲಿ ಜುಲೈ 10ರಂದು ನಡೆದಿದೆ. ಕೊಟ್ಟಾಯಿಯಲ್ಲಿನ ಮನೆಯೊಂದರಲ್ಲಿ ಅಜ್ಜಿಯು ಪ್ರತ್ಯೇಕವಾಗಿ ವಾಸಿಸುತ್ತಿದ್ದಾಳೆ. ವಿಚಿತ್ರವೆಂದರೆ ಮನೆಯಲ್ಲಿ ಆಕೆಯ ಸಂಬಂಧಿಕರಿದ್ದರೂ ಅವರೊಂದಿಗೆ ಯಾವುದೇ ಸಂಪರ್ಕವನ್ನು ಹೊಂದಿಲ್ಲ. ಜೊತೆಗೆ ತನ್ನ ಕೋಣೆಯೊಳಗೆ ಯಾರಿಗೂ ಪ್ರವೇಶ ನೀಡುತ್ತಿರುಲಿಲ್ಲ. ಇತ್ತೀಚೆಗಷ್ಟೇ ಅಜ್ಜಿ ಕೋಣೆಯಲ್ಲಿ ಹಾವು ನೋಡಿ ಮನೆಯಲ್ಲಿದ್ದ ಒಂದು ಗಂಟಿನ ಚೀಲವನ್ನು ತೆಗೆದು ಹೊರಗಡೆ ಇಟ್ಟಿದ್ದಳು. ಆದರೆ ಮಳೆ ಬಂದು ಚೀಲ ಒದ್ದೆಯಾಗಿತ್ತು. ಹೀಗಾಗಿ ಚೀಲವನ್ನು ತೆರೆದ ಅಜ್ಜಿ ಅದರಲ್ಲಿದ್ದ ರಾಶಿ ರಾಶಿ ಹಣವನ್ನು ಒಣಗಿಸುತ್ತಿದ್ದಳು.

ಅಜ್ಜಿ ನೋಟುಗಳನ್ನು ಒಣಗಿಸುತ್ತಿರುವುದನ್ನು ನೋಡಿದ ಮಕ್ಕಳು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಜ್ಜಿಯ ಮನೆಗೆ ಆಗಮಿಸಿದ ಪೊಲೀಸರು ಆಕೆಯ ಪರಿಸ್ಥಿತಿ ಕಂಡು ಮರುಕ ವ್ಯಕ್ತಪಡಿಸಿ ಹಣವನ್ನು ಲೆಕ್ಕ ಹಾಕಿ ಬ್ಯಾಂಕಿಗೆ ಜಮೆ ಮಾಡಿದ್ದಾರೆ. ಆದರೆ ಅಮಾನ್ಯೀಕರಣ ನೋಟುಗಳು ಕೂಡ ಗಂಟಿನಲ್ಲಿದ್ದವು. ಹೀಗಾಗಿ ಸ್ಥಳೀಯ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಹಣ ಸಂಗ್ರಹಿಸಿ ಸುಮಾರು 1.5 ಲಕ್ಷ ರೂ.ವನ್ನು ಅಜ್ಜಿಯ ಹೆಸರಿನಲ್ಲಿ ಡೆಪಾಸಿಟ್​ ಮಾಡಿದ್ದಾರೆ.

Edited By : Vijay Kumar
PublicNext

PublicNext

20/09/2020 04:19 pm

Cinque Terre

52.04 K

Cinque Terre

4