ಮತ್ತೇರಿಸೊ ದ್ರವ್ಯ ಹಾಗೂ ವಸ್ತುಗಳು ಜನರನ್ನು ತನ್ನತ್ತ ಸೆಳೆದು ಅವುಗಳ ದಾಸರನ್ನಾಗಿ ಮಾಡಿ ಬಿಡ್ತವೆ. ಕೊನೆಗೆ ಮನುಷ್ಯ ಅಂತಹ ದುಶ್ಚಟಗಳಿಂದ ಮುಕ್ತವಾಗುವುದು ದೂರದ ಮಾತೆ.
ಈ ದುಶ್ಚಟಗಳ ಸಾಲಿನಲ್ಲಿ ಸಿಗರೇಟ್, ಬಿಡಿ, ಗಾಂಜಾ ಹೊರತಾಗಿಲ್ಲ ಈ ವ್ಯಸನಗಳಿಗೆ ಮನುಷ್ಯರಂತೆ ಇಲ್ಲೊಂದು ಜಲವಾಸಿ ಪ್ರಾಣಿ ಸಿಗರೇಟ್ ಸೇದಿ ಉಫ್ ಎಂದು ಹೊಗಿ ಬಿಟ್ಟು ನೋಡುಗರನ್ನ ನಗೆ ನಗೆಗಡಲ ಮೂಲಕ ಆಶ್ಚರ್ಯಕ್ಕೆ ತಳ್ಳಿದೆ.
ಇದೇನಪ್ಪಾ ? ಜಲವಾಸಿ ಪ್ರಾಣಿ ಸಿಗರೇಟ್ ಸೇದುತ್ತಾ ಎಂದು ಆಶ್ಚರ್ಯ ನಾ ? ನಿಜಾ ಸ್ವಾಮಿ ಈ ವಿಡಿಯೋದಲ್ಲಿ ಏಡಿಯೊಂದು ಸಿಗರೇಟ್ ಸೇವಿಸಿ ಹೊಗೆ ಬಿಟ್ಟಿದೆ.
ಆದು ಥೇಟ್ ಮನುಷ್ಯರ ಶೈಲಿಯಲ್ಲೇ ಈ ವಿಡಿಯೋದಲ್ಲಿ ಬರುವ ಧ್ವನಿ ಗಮನಿಸವುದಾದರೇ ಇದು ತಮಿಳು ಭಾಷೆಯಾಗಿದ್ದು ಅಲ್ಲಿನ ಜನರೇ ಏಡಿಗೆ ಸಿಗರೇಟ್ ನೀಡಿದ್ರಾ ? ಅಥವಾ ಬಿದ್ದಿರುವ ಸಿಗರೇಟ್ ಏಡಿನೆ ತೆಗೆದುಕೊಂಡಿತ್ತಾ ? ಎಂಬದು ತಿಳಿದು ಬಂದಿಲ್ಲ.
ಆದರೆ ಏಡಿ ಸಿಗರೇಟ್ ಸೇದುವ ಶೈಲಿ ಮಾತ್ರ ನೋಡುಗರನ್ನ ಹುಬ್ಬೆರಿಸುವಂತೆ ಮಾಡಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
PublicNext
22/09/2020 03:08 pm