ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನನಗೆ ಹೆಣ್ಣು ಮಗು ಕರುಣಿಸು ತಂದೆ: ಆಂಜನಾದ್ರಿ ಹುಂಡಿಯಲ್ಲಿ ಭಕ್ತನ ಕೋರಿಕೆ ಪತ್ರ

ಕೊಪ್ಪಳ: 'ನನ್ನ ಮೇಲಿನ ಎಲ್ಲ ಕೇಸ್‌ಗಳು ವಜಾಗೊಂಡು ನಾನು ನಿರಾಳವಾಗುವಂತೆ ಮಾಡು. ನನಗೆ ಒಳ್ಳೆಯ ಹುದ್ದೆ ಸಿಗುವಂತೆ ಮಾಡು. ನನ್ನ ಹೆಂಡತಿಗೆ ಹೆರಿಗೆ ಸುಸೂತ್ರವಾಗಿ ಹೆಣ್ಣು ಮಗು ಕರುಣಿಸು ತಂದೆ...'

ಹೀಗೆ ಕೊಪ್ಪಳದ ಆಂಜನಾದ್ರಿ ಬೆಟ್ಟಕ್ಕೆ ಭಕ್ತನೊಬ್ಬ ಕೋರಿಕೆ ಪತ್ರ ಬರೆದು ಅದನ್ನು ಹುಂಡಿಯಲ್ಲಿ ಹಾಕಿದ್ದಾನೆ. ನಿನ್ನೆ ಸೋಮವಾರ ದೇವಸ್ಥಾನದ ಸಿಬ್ಬಂದಿ ಗ್ರೇಡ್-2 ತಹಶೀಲ್ದಾರ ವಿ.ಹೆಚ್.ಹೊರಪೇಟೆ ಅವರ ನೇತೃತ್ವದಲ್ಲಿ ಬೆಳಗ್ಗೆ ಹುಂಡಿ ಕಾಣಿಕೆ ಎಣಿಕೆ ಕಾರ್ಯ ನಡೆಸಿದ್ದಾರೆ. ಈ ಸಲ ಹುಂಡಿಯಲ್ಲಿ ಮೂರು ವಿದೇಶಿ ನಾಣ್ಯಗಳು ಸೇರಿ 10.45 ಲಕ್ಷ ರೂ. ಕಾಣಿಕೆ ಸಂಗ್ರಹವಾಗಿದೆ. ಇದರೊಂದಿಗೆ ಭಕ್ತನೊಬ್ಬನ ವಿಭಿನ್ನ ಕೋರಿಕೆಯ ಪತ್ರವೂ ಹುಂಡಿಯಲ್ಲಿ ಕಾಣಿಸಿಕೊಂಡಿದೆ.

ಕೊರೊನಾ ನಡುವೆಯೂ ಕಳೆದ 31 ದಿನದ ಅವಧಿಯಲ್ಲಿ ಇಷ್ಟೊಂದು ಹಣ ಸಂಗ್ರಹವಾಗಿರುವುದು ಕಂದಾಯ ಮತ್ತು ಸಾರ್ವಜನಿಕರಲ್ಲಿ ಆಶ್ಚರ್ಯ ಮೂಡಿಸಿದೆ. ಅಮೆರಿಕಾ ಮತ್ತು ಫಿಲಿಫೈನ್ ದೇಶದ ಮೂರು ನಾಣ್ಯಗಳು ಕಾಣಿಕೆ ರೂಪವಾಗಿ ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Edited By : Nagaraj Tulugeri
PublicNext

PublicNext

01/02/2022 11:28 am

Cinque Terre

47.24 K

Cinque Terre

6