ದೆಹಲಿ : 125 ವರ್ಷದ ಇಳಿವಯಸ್ಸಿನ ಈ ಹಿರಿಯ ಜೀವಿಯ ದಿನ ಆರಂಭವಾಗುವುದೇ ಯೋಗದಿಂದ ಇಡೀ ದಿನ ಬೇಯಿಸಿದ ಆಹಾರ, ನಿಯಮಿತ ದಿನಚರಿ, ಜನರ ಸೇವೆಯೇ ಅವರ ಆರೋಗ್ಯದ ಗುಟ್ಟು.
ಇವರು ಒಂದಿಲ್ಲೊಂದು ರೀತಿಯಲ್ಲಿ ಎಲ್ಲರಿಗೂ ಮಾದರಿ. ಅರೇ ಯಾರಿವರು ಅಂತಿರಾ ಇವರೇ ನೋಡಿ 125 ವರ್ಷ ವಯಸ್ಸಿನ ಸ್ವಾಮಿ ಶಿವಾನಂದ. ಆಗಸ್ಟ್ 8, 1896 ರಂದು ಈಗಿನ ಬಾಂಗ್ಲಾದೇಶ (ಆಗ ಭಾರತದ ಭಾಗ)ದ ಹಬೀಬ್ ಗಂಜ್ ಜಿಲ್ಲೆಯಲ್ಲಿ ಜನಿಸಿ ವಾರಣಾಸಿಯಲ್ಲಿ ವಾಸಿಸುತ್ತಿರುವ ಬ್ರಹ್ಮಚಾರಿ ಸ್ವಾಮಿ ಶಿವಾನಂದ್ ರವರು ಇಂದು ಪದ್ಮಶ್ರೀ ಸ್ವೀಕರಿಸಿದರು.
ಹೌದು ಯುಪಿ ಮೂಲದ ಯೋಗ ಗುರು ಸ್ವಾಮಿ ಶಿವಾನಂದ ಅವರು ಪದ್ಮಶ್ರೀ ಸ್ವೀಕಾರಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಮುಂದೆ ಮಂಡಿಯೂರಿ ನಮಸ್ಕರಿಸಿ ಬಳಿಕ ಗೌರವ ಸ್ವೀಕರಿಸಿದ ವಿಡಿಯೋ ವೈರಲ್ ಆಗಿದೆ.
ವಯಸ್ಸು,ಜ್ಞಾನದಲ್ಲಿ ಹಿರಿಕರಾದ ಇವರ ಸರಳತೆ ನಿಜಕ್ಕೂ ಮಾದರಿ.
PublicNext
21/03/2022 10:42 pm