ಯಾದಗಿರಿ:ಸರ್ಕಾರಿ ಬಸ್ ಗಳಲ್ಲಿ ಪ್ರಯಾಣಿಸೋರಿಗೆ ಟಿಕೆಟ್ ತೆಗೆದುಕೊಳ್ಳುತ್ತಾರೆ.ಲಗೇಜ್ ಇದ್ದರೇ ಅದಕ್ಕೆ ಪ್ರತೇಕ ಟಿಕೆಟ್ ಇರುತ್ತದೆ ಬಿಡಿ. ಆದರೆ ಬಸ್ ಗಳಲ್ಲಿ ಪ್ರಾಣಿಗಳಿಗೆ ಪ್ರಯಾಣಿಸೋ ಅವಕಾಶ ಇಲ್ಲವೇ ಇಲ್ಲ. ಆದರೆ ಇಲ್ಲೊಂದು ಘಟನೆ ನಡೆದಿದೆ. ಈ ಘಟನೆ ವಿಶೇಷವಾಗಿಯೂ ಇದೆ. ಬನ್ನಿ ಹೇಳ್ತೀವಿ.
ಮಾಲೀಕನೊಂದಿಗೆ ಬಸ್ ಏರಿ ಬಂದ ಎರಡು ಮೇಕೆ ಮರಿಗಳಿಗೂ ಕಂಡೆಕ್ಟರ್ ಫುಲ್ ಟಿಕೆಟ್ ಪಡೆದಿದ್ದಾರೆ. ಹೌದು. ಈ ಘಟನೆ ನಿಜವೇ. ಯಾದಗಿರಿಯಿಂದ ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಕೋಡ್ಲಾ ಗ್ರಾಮಕ್ಕೆ ತಮ್ಮ ಮೇಕೆ ಮರಿಗಳನ್ನ ತೆಗೆದುಕೊಂಡು ಹೋಗಲು ರೈತರಾದ ಸುನೀಲ್ ಮತ್ತು ರಾಮಲಿಂಗ ಮುಂದಾದರು.
ಆಗ ಕಂಡೆಕ್ಟರ್ ಮೇಕೆ ಮರಿಗೂ ಫುಲ್ ಟಿಕೆಟ್ ತೆಗೆದುಕೊಳ್ಳಿ ಅಂತಲೇ ಹೇಳಿದ್ದಾರೆ.ಅದನ್ನ ರೈತರು ಪ್ರಶ್ನೆ ಮಾಡಿದರೂ ಏನೂ ಪ್ರಯೋಜನವಾಗಿಯೇ ಇಲ್ಲ.ಕೊನೆಗೆ ಎರಡೂ ಮೇಕೆ ಮರಿಗೆ ಫುಲ್ ಟಿಕೆಟ್ ತೆಗೆದುಕೊಂಡು ಪ್ರಯಾಣ ಬೆಳೆಸಿದ್ದಾರೆ. ಅಷ್ಟೆ.
PublicNext
17/11/2021 02:14 pm