ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆಸ್ಪತ್ರೆಗೆ ದಾಖಲಿಸಿದವರಿಗೆ ಕೇಂದ್ರದಿಂದ ನಗದು ಬಹುಮಾನ

ಹೊಸದಿಲ್ಲಿ: ಇತ್ತೀಚೆಗೆ ರಸ್ತೆ ಅಪಘಾತಗಳು ಹೆಚ್ಚುತ್ತಿವೆ. ಇನ್ನು ಈ ರೀತಿ ಅಪಘಾತವಾಗುತ್ತಿದ್ದಂತೆ ಜನ ನೋಡಿಯೂ ನೋಡದ್ದಂತೆ ಮುಂದೆ ಸಾಗುತ್ತಿದ್ದರು. ಆದರೆ ಅಪಘಾತವಾದ ಸಂದರ್ಭಗಳಲ್ಲಿ ಗಾಯಾಳುಗಳನ್ನು ಶೀಘ್ರ ಆಸ್ಪತ್ರೆಗೆ ದಾಖಲಿಸಿದರೆ ಅವರ ಪ್ರಾಣ ಉಳಿಸಬಹುದು. ಈ ನಿಟ್ಟಿನಲ್ಲಿ ಜನರ ಗಮನ ಸೆಳೆಯಲು ಕೇಂದ್ರ ಸರ್ಕಾರ ಯೋಜನೆವೊಂದನ್ನಾ ರೂಪಿಸಿದೆ.

ಹೌದು ಅಪಘಾತವಾದ ವೇಳೆ ಗಾಯಗೊಂಡವರನ್ನು ಶೀಘ್ರವಾಗಿ ಆಸ್ಪತ್ರೆಗೆ ದಾಖಲಿಸುವ ಪರೋಪಕಾರಿ (ಸಮಾರಿಟನ್)ಗಳಿಗೆ 5 ಸಾವಿರ ರೂಪಾಯಿ ಬಹುಮಾನ ನೀಡಲು ಕೇಂದ್ರ ಸರಕಾರ ನಿರ್ಧರಿಸಿದೆ. ಅಪಘಾತದಲ್ಲಿ ಗಾಯಗೊಂಡವರಿಗೆ ನೆರವು ನೀಡಲು ಹಿಂದೇಟು ಹಾಕುವ ಪ್ರವೃತ್ತಿಯನ್ನು ದೂರ ಮಾಡಲು ಕೇಂದ್ರ ರಸ್ತೆ ಸಾರಿಗೆ ಸಚಿ ವಾಲಯ ಈ ಹೊಸ ಕ್ರಮಕ್ಕೆ ಮುಂದಾಗಿದೆ.

ಅ. 15ರಿಂದ ಈ ಯೋಜನೆ ಆರಂಭವಾಗಲಿದ್ದು, 2026ರ ಮಾರ್ಚ್ ವರೆಗೆ ಜಾರಿಯಲ್ಲಿರುತ್ತದೆ. ಅಪಘಾತ ಸಂಭವಿಸಿ 1 ಗಂಟೆಯೊಳಗೆ ಗಾಯಾಳು ಗಳನ್ನು ಆಸ್ಪತ್ರೆಗೆ ಸೇರಿಸಿ ಜೀವ ಉಳಿಸಲು ನೆರವು ನೀಡುವ ಮಹತ್ವದ ಕ್ರಮ ಇದಾಗಿದೆ.

ಬಹುಮಾನದ ಜತೆ ಪ್ರಶಂಸಾ ಪತ್ರವೂ ಸಿಗುತ್ತದೆ. ಒಂದು ವೇಳೆ ನಿಗದಿತ ಪ್ರಕರಣಗಳಲ್ಲಿ ಒಬ್ಬರಿಗಿಂತ ಹೆಚ್ಚು ಮಂದಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ನೆರವಾದರೆ 5 ಸಾವಿರ ರೂ. ಬಹುಮಾನದ ಮೊತ್ತವನ್ನು ಸಮನಾಗಿ ಹಂಚ ಲಾಗುತ್ತದೆ. ಜತೆಗೆ ರಾಷ್ಟ್ರಮಟ್ಟದಲ್ಲಿ ಕೂಡ ಹತ್ತು ಉತ್ತಮ ಪರೋಪಕಾರಿ (ಸಮಾರಿಟನ್) ವ್ಯಕ್ತಿಗಳಿಗೆ ವಾರ್ಷಿಕವಾಗಿ 1 ಲಕ್ಷ ರೂ. ಬಹುಮಾನ ನೀಡಿ ಗೌರವಿಸಲಾಗುತ್ತದೆ.

ಕೇಂದ್ರದ ನಿಯಮಗಳ ಪ್ರಕಾರ ಅಪಘಾತದ ಬಗ್ಗೆ ಸಮೀಪದ ಠಾಣೆಗೆ ಮಾಹಿತಿ ನೀಡಿದರೆ, ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯ ವೈದ್ಯರ ಜತೆಗೆ ಪೊಲೀಸರು ಮಾಹಿತಿ ಖಚಿತಪಡಿಸಿ, ಮಾಹಿತಿ ಸ್ವೀಕೃತಿ ನೀಡುತ್ತಾರೆ. ಅದನ್ನು ಜಿಲ್ಲಾಧಿಕಾರಿ ನೇತೃತ್ವದ ಪರಿಶೀಲನ ಸಮಿತಿಗೆ ಕಳುಹಿಸಲಾಗುತ್ತದೆ. ಒಂದು ವೇಳೆ ಪರೋಪಕಾರಿಗಳು ಗಾಯಾಳುಗಳನ್ನು ನೇರವಾಗಿ ಆಸ್ಪತ್ರೆಗೆ ದಾಖಲಿಸಿದರೆ, ವೈದ್ಯರೇ ನಿಗದಿತ ಠಾಣಾ ವ್ಯಾಪ್ತಿಗೆ ಮಾಹಿತಿ ನೀಡುತ್ತಾರೆ. ಆಗಲೂ ಪೊಲೀಸರು ಮಾಹಿತಿ ಸ್ವೀಕೃತಿ ಪತ್ರ ನೀಡುತ್ತಾರೆ ಮತ್ತು ಅದನ್ನು ಜಿಲ್ಲಾ ಸಮಿತಿಗೆ ಕಳುಹಿಸಿಕೊಡುತ್ತಾರೆ.

ಜಿಲ್ಲಾ ಮಟ್ಟದ ಸಮಿತಿ ಪ್ರತೀ ತಿಂಗಳು ಈ ಬಗ್ಗೆ ಮಾಹಿತಿ ಪರಿಶೀಲಿಸಿ ಬಹುಮಾನ ಬಿಡುಗಡೆ ಮಾಡಲು ಶಿಫಾರಸು ಮಾಡಲಾಗುತ್ತದೆ.

Edited By : Nirmala Aralikatti
PublicNext

PublicNext

07/10/2021 07:33 am

Cinque Terre

49.8 K

Cinque Terre

12