ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಳಿಗೂ ಟಿಕೆಟ್ ಕೊಟ್ಟ ಕಂಡಕ್ಟರ್

ಪುತ್ತೂರು: ಸರ್ಕಾರಿ ಬಸ್ಸಿನಲ್ಲಿ ಜೀವ ಇರುವ ಯಾವುದೇ ಪ್ರಾಣಿ ಅಥವಾ ಪಕ್ಷಿ ಕರೆದೊಯ್ದರೆ ಅದಕ್ಕೂ ಟಿಕೆಟ್ ನೀಡಲಾಗುತ್ತೆ. ಎರಡು ವರ್ಷಗಳ ಹಿಂದೆ ಬಳ್ಳಾರಿ ಜಿಲ್ಲೆಯಲ್ಲಿ ಇಂತಹದ್ದೇ ಘಟನೆ ನಡೆದಿತ್ತು. ಆಗ ಯುವಕನೊಬ್ಬ ಸರ್ಕಾರಿ ಬಸ್ಸಿನಲ್ಲಿ ಪಾರಿವಾಳ ಸಾಗಿಸಿದ್ದ.

ಈಗ ಅಂತದ್ದೇ ಘಟನೆ ಪುತ್ತೂರು ವಿಭಾಗದ ಕೆಎಸ್‌ಆರ್‌ಟಿಸಿ ಬಸ್‌ ಒಂದರಲ್ಲಿ ನಡೆದಿದೆ. ಈ ಘಟನೆಯನ್ನು ಹೊರ ಜಗತ್ತಿಗೆ ತಿಳಿಸಿದವರು ಪುತ್ತೂರು ಶಾಸಕ ಸಂಜೀವ ಮಠಂದೂರು. ಬುಧವಾರ ಪುತ್ತೂರಿನಲ್ಲಿ ನಡೆದ ಸಾರಿಗೆ ಅದಾಲತ್‌ನಲ್ಲಿ ಅವರು ಈ ವಿಷಯ ಪ್ರಸ್ತಾಪಿಸಿದ್ದಾರೆ. ಇದಕ್ಕೆ ಉತ್ತರಿಸಿದ ವಿಭಾಗೀಯ ಸಂಚಲನಾ ಅಧಿಕಾರಿ ಮುರಳೀಧರ್‌, ಸರಕಾರದ ಸುತ್ತೋಲೆ ಪ್ರಕಾರ ಬಸ್ಸಿನಲ್ಲಿ ಪ್ರಯಾಣಿಕರನ್ನು ಹೊರತುಪಡಿಸಿ ಪಕ್ಷಿ, ಪ್ರಾಣಿ ಯಾವುದೂ ಒಯ್ಯುವಂತಿಲ್ಲ. ಕೋಳಿಯೇ ಆದರೂ ಸರಿ, ಒಂದು ಕೋಳಿಗೆ ಒಬ್ಬ ಪ್ರಯಾಣಿಕನಷ್ಟೇ ದರವನ್ನು ನಿಗದಿಪಡಿಸಬೇಕೆಂಬ ನಿಯಮವಿದೆ. ಇದು ಸರ್ಕಾರದ ಆದೇಶವಾದ ಕಾರಣ ನಮ್ಮ ಕೈಯಲ್ಲಿ ಏನೂ ಇಲ್ಲ ಶಾಸಕರು ಕೋಳಿ ವಿಚಾರವಾಗಿ ವಿನಾಯ್ತಿ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಬಹುದು ಎಂದಿದ್ದಾರೆ.

Edited By : Nagaraj Tulugeri
PublicNext

PublicNext

11/02/2021 11:13 am

Cinque Terre

73.95 K

Cinque Terre

3