ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೆತ್ತ ಮಕ್ಕಳೊಂದಿಗೆ ಪರೀಕ್ಷೆ ಬರೆದ ಅಮ್ಮ : SSLC ಪಾಸ್

ಅಗರ್ತಲಾ : ಸಾಧನೆಗೆ ವಯಸ್ಸು ಬರೀ ಸಂಖ್ಯೆ ಎನ್ನುವುದನ್ನು ಇಲ್ಲೊಬ್ಬ ತಾಯಿ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ತಮ್ಮ 53ನೇ ವಯಸ್ಸಿನಲ್ಲಿ ಇಬ್ಬರು ಮಕ್ಕಳೊಂದಿಗೆ ಎಸ್ ಎಸ್ ಎಲ್ ಸಿ ಪರೀಕ್ಷೆ ಬರೆ ಪಾಸಾಗಿದ್ದಾರೆ.

ಹೌದು ಶಿಲಾ ರಾಣಿ ದಾಸ್ ಎಂಬುವವರು ತ್ರಿಪುರ ಪ್ರೌಢ ಶಿಕ್ಷಣ ಮಂಡಳಿ (ಟಿಬಿಎಸ್ ಇ) ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಇವರು

ತಮ್ಮ ಇಬ್ಬರು ಪುತ್ರಿಯರೊಂದಿಗೆ 10ನೇ ತರಗತಿಯ ಪರೀಕ್ಷೆಯನ್ನು ಬರೆದಿದ್ದರು. ಬುಧವಾರ ತ್ರಿಪುರ ಪ್ರೌಢ ಶಿಕ್ಷಣ ಮಂಡಳಿ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟಿಸಿದ್ದು, ತಮ್ಮ ಇಬ್ಬರು ಪುತ್ರಿಯರೊಂದಿಗೆ ಶಿಲಾ ರಾಣಿ ದಾಸ್ ಉತ್ತೀರ್ಣರಾಗಿದ್ದಾರೆ.

ಚಿಕ್ಕ ವಯಸ್ಸಿನಲ್ಲಿಯೇ ಶಿಲಾ ದಾಸ್ ಮದುವೆಯಾದರು. ಆದರೆ ದುರದೃಷ್ಟವಶಾತ್ ಅವರ ಪತಿ ಬೇಗ ನಿಧನರಾದರು. ಇದರಿಂದ ಶಿಲಾ ದಾಸ್ ಅವರಿಗೆ ಓದಲು ಸಾಧ್ಯವಾಗಲಿಲ್ಲ ಮತ್ತು ತಮ್ಮ ಇಬ್ಬರು ಮಕ್ಕಳನ್ನು ಒಬ್ಬಂಟಿಯಾಗಿ ಬೆಳೆಸಿದರು. ಹಲವು ವರ್ಷಗಳ ಬಳಿಕ ಇಬ್ಬರು ಪುತ್ರಿಯರು ತಮ್ಮ ತಾಯಿಗೆ 10ನೇ ತರಗತಿ ಪರೀಕ್ಷೆ ಬರೆಯುವಂತೆ ಒತ್ತಾಯಿಸಿದರು. ಹೀಗಾಗಿ ತಮ್ಮ ಮಕ್ಕಳ ಮಾರ್ಗದರ್ಶನದ ಮೇರೆಗೆ ಪರೀಕ್ಷೆಗೆ ಸಿದ್ಧತೆ ನಡೆಸಿ ಪಾಸ್ ಆಗಿದ್ದಾರೆ.

ಶಿಲಾ ರಾಣಿ ದಾಸ್ ಅವರ ಪುತ್ರಿ ಜಯಶ್ರೀ ನಮ್ಮ ತಾಯಿ, ನಾನು ಹಾಗೂ ನನ್ನ ಸಹೋದರಿ 10 ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದೇವೆ. ಮುಂದೆ ನಾವು 12ನೇ ತರಗತಿ ಪರೀಕ್ಷೆ ಬರೆದು ತೇರ್ಗಡೆಯಾಗುತ್ತೇವೆ. ಎಂದಿದ್ದಾರೆ.

Edited By : Nirmala Aralikatti
PublicNext

PublicNext

08/07/2022 07:57 am

Cinque Terre

85.09 K

Cinque Terre

5

ಸಂಬಂಧಿತ ಸುದ್ದಿ