ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಬುರಗಿ: ಬಿಟ್ಟೋಗ್ಬೇಡಿ ಸರ್..ಗಳಗಳನೆ ಅತ್ತ ಮಕ್ಕಳು

ಕಲಬುರಗಿ: ಗುರು ಶಿಷ್ಯರ ಬಾಂದ್ಯಕ್ಕೆ ಸರಿಸಾಟಿ ಮತ್ತೊಂದಿಲ್ಲ. ಪ್ರತಿಯೊಬ್ಬ ವಿದ್ಯಾರ್ಥಿಗೂ ನೆಚ್ಚಿನ ಗುರು ಎಂದರೆ ಬಲು ಪ್ರತಿ… ಸದ್ಯ ನಾವು ಯಾಕೆ ಗುರುಶಿಷ್ಯರ ಸಂಬಂಧದ ಬಗ್ಗೆ ಹೇಳುತ್ತಿದ್ದೇವೆ ಎಂದರೆ ಇಲ್ಲೊಂದು ಶಾಲೆಯಲ್ಲಿ ವರ್ಗಾವಣೆಗೊಂಡ ಶಿಕ್ಷಕರನ್ನು ಬಿಳ್ಕೋಡುವ ಮುನ್ನ ಮಕ್ಕಳು ಗಳಗಳನೆ ಅತ್ತ ದೃಶ್ಯ ಮನಕಲಕುವಂತಿದೆ.

ಹೌದು ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಲಿಂಗಂಪಲ್ಲಿ ಗ್ರಾಮದಲ್ಲಿ 9 ವರ್ಷಗಳ ಕಾಲ ಶಿಕ್ಷಕ ಶ್ರೀನಿವಾಸ ಕುಲಕರ್ಣಿಯವರಿ ಬೇರೆಡೆ ವರ್ಗಾವಣೆಯಾಗಿತ್ತು. ಈ ಹಿನ್ನಲೆಯಲ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅವರಿಗೆ ಬಿಳ್ಕೋಡೆಗೆ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಈ ವೇಳೆ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕ ಹಾಗೂ ಸಹೋದ್ಯೋಗಿಗಳ ಜೊತೆ ಉತ್ತಮ ಸಂಬಂಧ ಹೊಂದಿರುವ ಗುರುಗಳನ್ನು ಬಿಟ್ಟು ಕಳಿಸಲು ಮನಸ್ಸಿಲ್ಲದ ಮಕ್ಕಳು ಗಳಗಳನೆ ಅತ್ತಿದ್ದಾರೆ.

ಶಿಕ್ಷಕನ ವಿದಾಯದ ವೇಳೆ ವಿದ್ಯಾರ್ಥಿಗಳ ಕಣ್ಣೀರಿನ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Edited By : Manjunath H D
PublicNext

PublicNext

11/12/2021 01:40 pm

Cinque Terre

51.72 K

Cinque Terre

5

ಸಂಬಂಧಿತ ಸುದ್ದಿ