ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಸೆಮಣೆ ಏರಬೇಕಾದವಳು ಆಸ್ಪತ್ರೆ ಸೇರಿದಳು : ಬೆಡ್ ಮೇಲೆ ನಡೆಯಿತು ಮಾಂಗಲ್ಯಧಾರಣ

ಉತ್ತರ ಪ್ರದೇಶ : ಸಿನಿಮಾ ರೀತಿಯಲ್ಲಿಯೇ ಕೆಲವು ಘಟನೆಗಳು ನಿಜ ಜೀವನದಲ್ಲಿಯೂ ನಡೆಯುತ್ತವೆ.

ಇಂತಹ ಘಟನೆಗಳು ಅತೀ ವಿರಳವಾದರೂ ಅಲ್ಲಲ್ಲಿ ನಡೆಯುತ್ತಿರುತ್ತವೆ. ಸದ್ಯ 2006 ರಲ್ಲಿ ರೀಲಿಜ್ ಆದ ವಿವಾಹ ಸಿನಿಮಾದಂತೆ ಉತ್ತರ ಪ್ರದೇಶದಲ್ಲೊಂದು ಘಟನೆ ನಡೆದಿದೆ.

ಸಿನಿಮಾದಂತೆಯೇ ನಿಜ ಜೀವನದಲ್ಲೂ ಆದರ್ಶ ವ್ಯಕ್ತಿಗಳಿರುತ್ತಾರೆ ಎನ್ನುವುದಕ್ಕೆ ಮದುವೆಯೇ ಸಾಕ್ಷಿ.

ಹೌದು ಉತ್ತರ ಪ್ರದೇಶದನ ಪ್ರಯಾಗ್ ರಾಜ್ ನ ಆರತಿ ಎಂಬ ಯುವತಿಗೆ ಅವಧೇಶ್ ಎಂಬ ಯುವಕನೊಂದಿಗೆ ಮದುವೆ ನಿಶ್ಚಯವಾಗಿತ್ತು.

ಡಿಸೆಂಬರ್ 8ರ ಸಂಜೆ ವಧು ವರರಿಬ್ಬರು ಹಸೆ ಮಣೆ ಏರಬೇಕಿತ್ತು.

ಆದರೆ ಮಧ್ಯಾಹ್ನದ ವೇಳೆ ಮೂರ್ನಾಲ್ಕು ಮಕ್ಕಳು ಮನೆಯ ಮೇಲಿನ ಟೆರೇಸ್ ನಲ್ಲಿ ಆಟವಾಡುತ್ತಿದ್ದಾಗ ಅದರಲ್ಲಿ ಮೂರು ವರ್ಷದ ಮಗುವೊಂದು ಟೆರೇಸ್ನಿಂದ ಬೀಳುವುದನ್ನಾ ತಪ್ಪಿಸಲು ಆರತಿ ಮುಂದಾಗಿ ಮಗುವನ್ನು ರಕ್ಷಿಸಿದ್ದಾಳೆ.

ವಿಧಿಯಾಟ ಘಟನೆಯಲ್ಲಿ ಆಕೆಯೇ ಟೆರೇಸ್ ನಿಂದ ಕೆಳಗೆ ಬಿದ್ದಿದ್ದು, ಆಕೆಯ ಬೆನ್ನು ಮೂಳೆ ಮುರಿದಿದೆ.

ಕಾಲುಗಳೆರೆಡು ಸ್ವಾಧೀನ ಕಳೆದುಕೊಂಡಿದೆ. ತಕ್ಷಣ ಆರತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ನಡೆದ ವಿಚಾರವನ್ನು ವರ ಅವಧೇಶ್ ಗೆ ತಿಳಿಸಿ, ಆರತಿಯ ಬದಲು ಆಕೆಯ ತಂಗಿಯನ್ನು ಮದುವೆಯಾಗುವಂತೆ ಕೇಳಿಕೊಳ್ಳಲಾಗಿದೆ.

ಆದರೆ ಅದಕ್ಕೆ ಒಪ್ಪದ ಅವಧೇಶ್ ಆಸ್ಪತ್ರೆಯಲ್ಲಿಯೇ ಬಂಧುಗಳ ಸಮ್ಮುಖದಲ್ಲಿ ಆರತಿಯನ್ನೇ ವಿವಾಹವಾಗಿದ್ದಾನೆ.

ಹಾಸಿಗೆ ಮೇಲಿದ್ದ ಆರತಿಗೆ ತಾಳಿ ಕಟ್ಟಿರುವ ಅವಧೇಶ್ ಆಕೆಯನ್ನು ತನ್ನ ಮಗುವಿನಂತೆ ಆರೈಕೆ ಮಾಡಲಾರಂಭಿಸಿದ್ದಾನೆ.

ಅವಧೇಶ್ ನ ಕಾರ್ಯ ಮಾದರಿಯಾಗಿದೆ.

Edited By : Nirmala Aralikatti
PublicNext

PublicNext

16/12/2020 05:21 pm

Cinque Terre

140.81 K

Cinque Terre

56