ಚೆನ್ನೈ : ಕೇವಲ 58 ನಿಮಿಷದಲ್ಲಿ 46 ಬಗೆ ಅಡುಗೆ ಸಿದ್ಧಪಡಿಸುವ ಮೂಲಕ ತಮಿಳುನಾಡಿನ ಬಾಲಕಿ ವಿಶ್ವದಾಖಲೆ ಬರೆದಿದ್ದಾಳೆ.
ಪಾಕಶಾಸ್ತ್ರದ ಯುನಿಕೋ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಮಾಡಿದ್ದಾಳೆ ಎಂದು ಎಎನ್ ಐ ಟ್ವೀಟ್ ಮಾಡಿದೆ.
'ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಅಡುಗೆ ಬಗ್ಗೆ ಆಸಕ್ತಿ ಬೆಳೆಸಿಕೊಂಡೆ.
ನನ್ನ ತಾಯಿ ನನಗೆ ಅಡುಗೆ ಮಾಡುವುದನ್ನ ಹೇಳಿಕೊಟ್ಟರು.
ಆ ಮೂಲಕ ನಾನು ಈ ಹೊಸ ಮೈಲಿಗಲ್ಲು ಸಾಧಿಸಿರುವುದು ಹೆಚ್ಚು ಸಂತಸವಾಗುತ್ತಿದೆ' ಎಂದು ವಿಶ್ವ ದಾಖಲೆ ಬರೆದಿರುವ ಬಾಲಕಿ ಎಸ್.ಎನ್. ಲಕ್ಷ್ಮೀ ಸಾಯಿ ಶ್ರೀ ಹೇಳಿದ್ದಾರೆ.
" ಪಾಕಶಾಸ್ತ್ರದ ದಾಖಲೆಗಳ ಬಗ್ಗೆ ಅಧ್ಯಯನ ನಡೆಸಿದ ಲಕ್ಷ್ಮೀ ತಂದೆಗೆ ಕೇರಳದ 10 ವರ್ಷದ ಬಾಲಕಿ ಸಾನ್ವಿ 30 ಅಡುಗೆ ಮಾಡಿದ ದಾಖಲೆ ಕಣ್ಣಿಗೆ ಬಿದ್ದಿದೆ.
ತನ್ನ ಮಗಳು ಈ ದಾಖಲೆ ಮುರಿಯಬೇಕು ಎಂದು ನಿಶ್ಚಯಿಸಿದ ಅವರ ತಂದೆ ಈ ಪ್ರಯತ್ನಕ್ಕೆ ಪ್ರೇರೆಣೆಯಾದರು" ಎಂದು ಲಕ್ಷ್ಮೀ ತಾಯಿ ಕಲೈಮಗಳ್ ಹೇಳುತ್ತಾರೆ.
PublicNext
16/12/2020 01:00 pm