ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಂಚಾರಿ ಪೇದೆಯ ಸುರಕ್ಷತಾ ಕರೆಯೋಲೆ: ಅಧಿಕಾರಿಗಳೆಂದರು ಭಲೆ ಭಲೆ

ಬೆಂಗಳೂರು: ಮದುವೆ ಆಗುವವರು ಸಂಪ್ರದಾಯದಂತೆಯೇ ಆಮಂತ್ರಣ ಪ್ರಿಂಟ್ ಮಾಡಿಸುತ್ತಾರೆ. ಅದರಲ್ಲೂ ಶ್ರೀಮಂತರು ದುಬಾರಿ ಲಗ್ನ ಪತ್ರಿಕೆ ಪ್ರಿಂಟ್ ಮಾಡಿಸಿ ಆಡಂಬರ ತೋರುತ್ತಾರೆ. ಆದರೆ ನಾನೇ ಬೇರೆ ನನ್ನ ಸ್ಟೈಲೇ ಬೇರೆ ಎಂಬಂತಿರುವ ಈ ಸಂಚಾರಿ ಪೇದೆ ಇದುವರೆಗೆ ನಾವು ಕಂಡಿರದಂತ ಮದುವೆ ಆಮಂತ್ರಣ ಮಾಡಿಸಿದ್ದಾರೆ. ಈ ಕಾರ್ಯಕ್ಕೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ರೀತಿ ಎಲ್ಲರಿಗಿಂತ ವಿಭಿನ್ನವಾಗಿ ಮದುವೆ ಆಮಂತ್ರಣ ಪ್ರಿಂಟ್ ಮಾಡಿಸಿದವರು ಬೆಂಗಳೂರು ಹೊರವಲಯದ ನೆಲಮಂಗಲ ಸಂಚಾರಿ ಪೊಲೀಸ್ ವಿಭಾಗದ ಕಾನ್ಸ್‍ಟೇಬಲ್ ಮಂಜುನಾಥ್ ಅವರು. ಅವರ ಈ ವಿವಾಹ ಆಮಂತ್ರಣ ಪತ್ರಿಕೆಯು ಸಂಚಾರಿ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುವ ಕರೆಯೋಲೆಯಾಗಿದೆ. ಈ ಲಗ್ನ ಪತ್ರಿಕೆ ವಿಶೇಷ ಮತ್ತು ವಿನೂತನವಾಗಿದ್ದು ಇದರ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ತಮ್ಮ ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ಸಂಚಾರಿ ನಿಯಮಗಳ ಜಾಗೃತಿ ಮೂಡಿಸುವ ಹಾಗೂ ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ಉಪಯೋಗವಾಗುವಂತಹ ಆಮಂತ್ರಣ ಮುದ್ರಿಸಿ ಮದುವೆಗೆ ಆಹ್ವಾನಿಸುತ್ತಿದ್ದಾರೆ. ಡಿಸೆಂಬರ್ 16 ಹಾಗೂ 17 ರಂದು ದಾವಣಗೆರೆಯ ಖಾಸಗಿ ಕಲ್ಯಾಣ ಮಂಟಪದಲ್ಲಿ ಸಂಚಾರಿ ಪೊಲೀಸ್ ಪೇದೆಯ ಕಲ್ಯಾಣ ಮಹೋತ್ಸವ ನಡೆಯಲಿದೆ.

Edited By : Nagaraj Tulugeri
PublicNext

PublicNext

16/12/2020 11:10 am

Cinque Terre

84.79 K

Cinque Terre

11

ಸಂಬಂಧಿತ ಸುದ್ದಿ