ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವಿನಿಂದಲೇ ಸಾವನಪ್ಪಿದ ಸ್ನೇಕ್ ಡ್ಯಾನಿ

ಬಾಗಲಕೋಟೆ: ವಿವಿಧ ತಳಿಯ ವಿಷಜಂತು ಹಾವುಗಳನ್ನು ಸಂರಕ್ಷಿಸುವ ಮೂಲಕ ಸ್ನೇಕ್ ಡ್ಯಾನಿ ಎಂದೇ ಚಿರಪರಿಚಿತರಾಗಿದ್ದ ಉರಗ ತಜ್ಞ ಡೇನಿಯಲ್ ನ್ಯೂಟನ್ ಹಾವು ಹಿಡಿಯುವ ವೇಳೆ ಸಾವಿಗೀಡಾಗಿದ್ದಾರೆ.

ಜಿಲ್ಲೆಯ ಸೀಗಿಕೇರಿಯ ಗ್ರಾಮದ ಮನೆಯೊಂದರಲ್ಲಿ ನಾಗರಹಾವನ್ನು ಹಿಡಿಯುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ನಗರದ ಜಯನಗರ ನಿವಾಸಿಯಾದ 43 ವರ್ಷದ ಡೇನಿಯಲ್ ಈ ತನಕ 1,036 ನಾಗರಹಾವುಗಳು ಸೇರಿದಂತೆ 3,279 ಹಾವುಗಳನ್ನು ರಕ್ಷಿಸಿದ್ದರು.

ಈ ಹಿಂದೆ, ಒಂದಲ್ಲ, ಎರಡಲ್ಲ ಬರೋಬ್ಬರಿ 75 ಬಾರಿ ಹಾವಿನಿಂದ ಕಚ್ಚಿಸಿಕೊಂಡಿದ್ದರೂ ಬದುಕುಳಿದಿದ್ದರು.

ಆದರೆ ದುರದೃಷ್ಟವಶಾತ್, ಡ್ಯಾನಿ ಈ ಬಾರಿ ಬದುಕುಳಿಯಲಿಲ್ಲ. ದುಃಖದ ವಿಷಯವೆಂದರೆ, ಡೇನಿಯಲ್ ಒಂದು ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು.

ಇದೀಗ, ಹಲವಾರು ಉರಗಗಳನ್ನು ರಕ್ಷಿಸಿ ಸಾರ್ಥಕ ಬದುಕು ನಡೆಸಿದ್ದ ಡೇನಿಯಲ್ ತಾವು ಬದುಕಿದ್ದಾಗಲೇ ತಮ್ಮ ದೇಹವನ್ನು ದಾನ ಮಾಡಿದ್ದರು ಎಂದು ಹೇಳಲಾಗಿದೆ.

ಈ ಮೂಲಕ ಡ್ಯಾನಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

Edited By : Nirmala Aralikatti
PublicNext

PublicNext

15/12/2020 07:25 pm

Cinque Terre

56.22 K

Cinque Terre

3

ಸಂಬಂಧಿತ ಸುದ್ದಿ