ಕೇರಳದ ಕೊಟ್ಟಾಯಂನಲ್ಲಿರುವ ಅಂಗಡಿಯೊಂದು ಈಗ ತನ್ನ ಹೆಸರಿನಿಂದಲೇ ಎಲ್ಲರನ್ನು ಆಕರ್ಷಿಸುತ್ತಿದೆ. ಅದು ತನ್ನ ಏರಿಯಾದಲ್ಲಿ ಹವಾ ಸೃಷ್ಟಿಸಿದೆ. ಪ್ರಪಂಚದ ಪ್ರತಿಯೊಬ್ಬರಿಗೂ ತಿಳಿದಿರುವ , ಜಗತ್ತನ್ನೇ ಭಯಬೀಳಿಸಿದ, ದೇಶದ ಆರ್ಥಿಕತೆಯನ್ನೇ ಅಲ್ಲೋಲ ಕಲ್ಲೋಲವಾಗಿಸಿದ ಹೆಮ್ಮಾರಿಯಾಗಿ ಜನತೆಯನ್ನು ಕಾಡಿದ ಮಹಾಮಾರಿ ಕಾಯಿಲೆ 'ಕೊರೊನಾ' ಹೆಸರನ್ನೇ ಈ ಅಂಗಡಿಗೆ ಇಡಲಾಗಿದೆ. ಆದರೆ ಆಶ್ಚರ್ಯವೆನೇಂದರೆ ಕೊರೊನಾ ಮಹಾಮಾರಿ ಗುರುತಿಸಿಕೊಂಡದ್ದು ಕಳೆದ ಒಂದು ವರ್ಷದಿಂದ. ಆದರೆ ಈ ಅಂಗಡಿಯ ಮಾಲೀಕರಾಗಿರುವ ಕೊಟ್ಟಾಯಂ ಮೂಲದ ಜಾರ್ಜ್, ಏಳು ವರ್ಷಗಳ ಹಿಂದೆಯೇ ತನ್ನ ಅಂಗಡಿಗೆ ‘ಕೊರೊನಾ’ ಎಂದು ಹೆಸರಿಟ್ಟಿದ್ದರು.
"ಕೊರೊನಾ ಎಂಬುದು ಲ್ಯಾಟಿನ್ ಪದವಾಗಿದ್ದು, ಕೊರೊನಾ ಎಂದರೆ ಕಿರೀಟ ಎಂದರ್ಥ . ಹೀಗಾಗಿ ನಾನು ಏಳು ವರ್ಷಗಳ ಹಿಂದೆಯೇ ನನ್ನ ಅಂಗಡಿಗೆ ಕೊರೊನಾ ಎಂದು ಹೆಸರಿಟ್ಟಿದ್ದೆ ಎಂದು ಅಂಗಡಿ ಮಾಲೀಕರು ಹೇಳಿದ್ದಾರೆ. ಕಾರಣ ಏನೇ ಇದ್ದರೂ ಜನರೀಗ ಈ ಅಂಗಡಿಯ ಹೆಸರು ನೋಡಿಯೇ ಇಲ್ಲಿ ಭೇಟಿ ನೀಡುತ್ತಿರುವುದಕ್ಕೆ ಜಾರ್ಜ್ ಸಂತಸ ವ್ಯಕ್ತಪಡಿಸುತ್ತಿದ್ದಾರೆ.
PublicNext
19/11/2020 03:31 pm