ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಾಲೀಕನ ಜೀವ ಉಳಿಸಿದ ಗಿಣಿ: ಮನೆಯ ಮುಕುಟಮಣಿ

ಬ್ರಿಸ್ಟೇನ್:ಚಾಣಾಕ್ಷ ಗಿಳಿಯೊಂದು ಮನೆಯಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಿಂದ ತನ್ನ ಮಾಲೀಕನ ಜೀವ ಉಳಿಸಿದೆ! ಇಂತದ್ದೊಂದು ಮನಮುಟ್ಟುವ ಘಟನೆಗೆ ಎಲ್ಲರೂ ಅಚ್ಚರಿಗೊಂಡಿದ್ದಾರೆ.

ಆಂಟನ್ ನುಯೇನ್ ಎಂಬುವವರೇ ಬಚಾವಾದ ಮಾಲೀಕ. ಬ್ರಿಸ್ಟೇನಿನ ಕಾಂಗರೋ ನಗರದಲ್ಲಿರುವ ಆಂಟನ್ ಅವರ ಮನೆಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿತ್ತು‌. ಇದನ್ನು ಗಮನಿಸಿದ ಗಿಳಿ ಪದೇ ಪದೇ ಮಾಲೀಕನ ಹೆಸರು ಕೂಗಿ ಮಲಗಿದ್ದ ಮಾಲೀಕನನ್ನು ಎಬ್ಬಿಸಿದೆ. ಈ ಮೂಲಕ ಆಂಟನ್ ಸಾಕಿದ ಗಿಳಿ, ಜಾಣ ಗಿಳಿ ಎನಿಸಿಕೊಂಡಿದೆ.

ಎಚ್ಚರಗೊಂಡ ಗಿಳಿ ಕೂಡಲೇ ಅಗ್ನಿಶಾಮಕ ಸಿಬಂದಿಗೆ ಕರೆ ಮಾಡಿದ್ದಾರೆ‌. ಕೂಡಲೇ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ‌. ಅಗ್ನಿ ಶಾಮಕ ಅಧಿಕಾರಿ ಕ್ಯಾಮ್ ಥಾಮಸ್ ಕೂಡ ಗಿಳಿಯ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

Edited By : Nagaraj Tulugeri
PublicNext

PublicNext

05/11/2020 05:02 pm

Cinque Terre

45.42 K

Cinque Terre

1