ರೈತ ದೇಶದ ಬೆನ್ನೆಲುಬು ಆತನಿಂದಲೇ ಅನ್ನಕ್ಕೆ ದಾರಿ ಎಂಬ ತಾತ್ಪರ್ಯದ ಅರಿವು ಯಾರಿಗಿಲ್ಲ ಹೇಳಿ ? ಅಂತಹ ರೈತ ಜಗತ್ತಿಗೆ ಅನ್ನ ನೀಡುತ್ತಾ ತಾನು ಮಾತ್ರ ನಿಸ್ವಾರ್ಥಿಯಾಗಿ ತನ್ನ ಕಾಯಕ ಮಾಡುತ್ತಾ ದೂರಲ್ಲೋ ಉಳಿದು ಬಿಡುತ್ತಾನೆ.
ಹೌದು ! ನೀವೂಮ್ಮೆ ಈ ವಿಡಿಯೋ ಗಮನಿಸಿ ಇಲ್ಲೊಬ್ಬ ರೈತ ತನ್ನ ಒಂದು ಕಾಲನ್ನು ಕಳೆದುಕೊಂಡರು ಊರಗೋಲಿನ ಆಸರೆ ಪಡೆದು ಹೇಗೆ ತನ್ನ ಕೃಷಿ ಕಾಯಕ ಮಾಡುತ್ತಾ ಜಮೀನಿನಲ್ಲಿರುವ ನೀರು ಕೊಚ್ಚಿ ಹೋಗದಂತೆ ಸಲಾಕೆಯಿಂದ ಬದುವಿಗೆ ಮಣ್ಣನ್ನು ಎತ್ತಿ ಸಾಕುವ ಸ್ಥಿತಿ ಎಂತಹವರ ಹೃದಯದಲ್ಲೂ ಕನಿಕರ ಹುಟ್ಟಿಸಿ ಬಿಡುತ್ತೆ ಅಲ್ವಾ ! ಈಗಾಗಲೇ ಬೆಳೆಯುತ್ತಿರುವ ವಿದ್ಯಮಾನದಲ್ಲಿ ನಾವೆಲ್ಲಾ ಪಾಸ್ಟ್ ಫುಡ್ ದಾಸರಾಗಿ ಯಾವುದೋ ಖಾಸಗಿ ಕಂಪನಿ ಆಹಾರದ ಜಾಹೀರಾತುಗಳಿಗೆ ಮಾರು ಹೊರಟಿದ್ದೇವೆ ವಿನಃ ಅನ್ನ ಬೆಳೆದ ರೈತನ ಶ್ರಮ ಗುರುತಿಸುತ್ತಿಲ್ಲ ಹಾಗೂ ಆಹಾರ ಹಾಳು ಮಾಡುವುದನ್ನು ತೀರಾ ಗಮನಕ್ಕೆ ತೆಗೆದುಕೊಂಡಿಲ್ಲ.
ನೀವು ಕೇಳಿರಿರುತ್ತಿರಾ ಸಿ. ಅಶ್ವತ್ ಹಾಡಿದ ಒಂದು ಸಾಹಿತ್ಯದಲ್ಲಿ ಲೋಕದೊಳಗೇನು ನಡಿಯುತಲಿರಲಿ, ತನ್ನಿ ಈ ಕಾರ್ಯವ ಬಿಡನೆಂದು ರಾಜ್ಯಗಳಳಿಸಲಿ ರಾಜ್ಯಗಳ ಉರುಳಲಿ, ಹಾರಲಿ ಗದ್ದುಗೆ ಮುಕುಟಗಳು ಮುತ್ತಿಗೆ ಹಾಕಲಿ ಸೈನಿಕರೆಲ್ಲಾ ಬಿತ್ತಳುವುದನವ ಬಿಡುವುದೆ ಇಲ್ಲಾ ..ಜಗತ್ತಿನಲ್ಲಿ ಏನೇ ಸಂಗತಿ ಗತಿಸಲಿ ಆದರೆ ರೈತ ಮಾತ್ರ ಬಿತ್ತವುದು ಉಳುವುದು ಬೀಡುವುದೆ ಇಲ್ಲಾ ಇದಕ್ಕೆ ಸಾಕ್ಷಿ ಎಂಬಂತೆ ಈ ವರ್ಷ ಕೊರೊನಾ ವೈರಸ್ ಮಹಾಮಾರಿ ಜಗತ್ತಿಗೆ ವಕ್ಕರಿಸಿ ಎಂತಹ ದೊಡ್ಡ ದೊಡ್ಡ ಚಟುವಟಿಕೆ ನಿಂತರೂ ರೈತಾಪಿ ಕೆಲಸ ನಡೆದೆ ಇತ್ತು.
ಸದ್ಯ ಒಂಟಿ ಕಾಲಿನಲ್ಲಿ ತನ್ನ ಇಳಿವಯಸ್ಸಿನಲ್ಲೂ ಗದ್ದೆಯಲ್ಲಿ ರೈತ ಕೆಲಸ ಮಾಡುವ ಈ ವಿಡಿಯೋ ಸೋಷಿಯಲ್ ಮೀಡಿಯಾ ಒಳಗೆ ಹರಿದಾಡುತ್ತಿದ್ದು ಅದೆಷ್ಟೋ ಜನರ ಹೃದಯಗೆದ್ದಿರುವ ವಿಡಿಯೋ ಎಲ್ಲಿಯದು ಎಂಬುದು ತಿಳಿದು ಬಂದಿಲ್ಲಾ.
PublicNext
26/09/2020 08:44 pm