ನಾಯಿ ಪ್ರೀತಿಗೆ ಕೊನೆ ಇಲ್ಲ ಎಂಬ ಮಾತಿಗೆ ಉದಾಹರಣೆ ಎಂಬಂತೆ ಇಲ್ಲೊಂದು ಘಟನೆ ನಡೆದಿದೆ. ಮಿಸ್ ಆಗಿದ್ದ ಚೀನಾದ ನಾಯಿಯೊಂದು ಎರಡು ವಾರಗಳ ಕಾಲ ತನ್ನ ಮಾಲೀಕನನ್ನು ಹುಡುಕಾಡಿದೆ. ಇದಕ್ಕಾಗಿ ಅದು 62 ಕಿಮೀ ಪ್ರಯಾಣ ಮಾಡಿದೆ.
ವಿಷಯ ಏನಂದ್ರೆ ಇದರ ಮಾಲೀಕ ತನ್ನ ಮನೆ ರಿಪೇರಿ ಕೆಲಸ ಇದೆ ಎಂಬ ಕಾರಣಕ್ಕೆ ತನ್ನ ನಾಯಿಯನ್ನು ಸ್ನೇಹಿತನ ಮನೆಯಲ್ಲಿ ಬಿಟ್ಟಿದ್ದರು. ಆದ್ರೆ ಅಲ್ಲಿರಲಾಗದ ಪಿಂಗ್ ಎಂಬ ಈ ನಾಯಿ ತನ್ನ ಮಾಲೀಕನನ್ನು ಅರಸುತ್ತ ಹೊರಬಂದಿದೆ. ಅಲ್ಲಲ್ಲಿ ಅಲೆದು ಖಿನ್ನತೆಗೆ ಒಳಗಾಗಿತ್ತಂತೆ. ಕಡೆಗೆ ಒಂದು ಆಫೀಸಿನ ಮುಂಭಾಗದಲ್ಲಿ ಸುಸ್ತಾಗಿ ಮಲಗಿತ್ತು. ಈ ನಾಯಿಯನ್ನ ಕಂಡ ಅಲ್ಲಿನವರು ಪತ್ರಿಕೆಯಲ್ಲಿ ಜಾಹೀರಾತು ಕೊಟ್ಟು ಮಾಲೀಕರನ್ನು ಹುಡುಕಿಸಿದ್ದಾರೆ. ಆದರೂ ಪ್ರಯೋಜನ ಆಗಿಲ್ಲ.
ನಾಯಿ ತನ್ನ ಛಲ ಮಾತ್ರ ಬಿಟ್ಟಿಲ್ಲ. ಮತ್ತೆ ಪ್ರಯಾಣ ಆರಂಭಿಸಿದ ನಾಯಿ ಒಂದೊಂದಾಗಿ ಜಾಗಗಳ ಗುರುತು ಹಿಡಿದು 2 ವಾರಗಳ ನಂತರ ತನ್ನ ಮಾಲೀಕನ ಮಡಿಲು ಸೇರಿದೆ.
ತನ್ನ ಪ್ರೀತಿಯ ಶ್ವಾನ ಪಿಂಗ್ ವಾಪಸ್ ತಂತಾನೇ ಮನೆಗೆ ಬಂದಿದ್ದನ್ನು ಕಂಡ ಮಾಲೀಕ ನಾಯಿಯ ತಲೆ ನೇವರಿಸಿ ರಮಿಸಿದ್ದಾರೆ. ಮರಳಿ ಮಾಲೀಕನ ಮನೆ ಸೇರಿದ ಗೋಲ್ಡನ್ ರಿಟ್ರೀವರ್ ತಳಿಯ ನಾಯಿ ಮತ್ತೆ ಚಿಗುರಾಗಿದೆ.
PublicNext
03/11/2020 03:08 pm