ಕಲಬುರಗಿ: ಹಿರಿಯ ರೈತ ಹೋರಾಟಗಾರ ಮಾರುತಿ ಮಾನ್ಪಡೆ(65) ವಿಧಿವಶರಾಗಿದ್ದಾರೆ.
ಮಹಾರಾಷ್ಟ್ರದ ಸೊಲ್ಲಾಪುರದ ಖಾಸಗಿ ಆಸ್ಪತ್ರೆಯಲ್ಲಿ ಮಾರುತಿ ಮಾನ್ಪಡೆ ನಿಧನರಾಗಿದ್ದಾರೆ.
ರಾಜ್ಯ ಪ್ರಾಂತ ರೈತ ಸಂಘದ ಉಪಾಧ್ಯಕ್ಷರಾಗಿದ್ದ ಮಾನ್ಪಡೆ ರೈತರು ಮತ್ತು ಕಾರ್ಮಿಕರ ಪರ ಹಲವು ಹೋರಾಟ ನಡೆಸಿದ್ದರು.
ಕೆಲ ದಿನಗಳ ಹಿಂದೆ ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಚಿಕಿತ್ಸೆಯ ಬಳಿಕ ಗುಣಮುಖರಾಗಿದ್ದರು.
ಇದೀಗ ಮಾರುತಿ ಮಾನ್ಪಡೆ ನ್ಯೂಮೋನಿಯಾದಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
PublicNext
20/10/2020 01:18 pm