ಮ್ಯಾಂಚೆಸ್ಟರ್: ಮಗಳ ಪುಟ್ಟ ಸೈಕಲ್‌ನಲ್ಲಿ ವ್ಯಕ್ತಿಯೊಬ್ಬರು 370 ಕಿ.ಮೀ. ದೂರ ಕ್ರಮಿಸಿ, ಬರೋಬ್ಬರಿ 5.61 ಲಕ್ಷ ರೂ. ದೇಣಿಗೆ ಸಂಗ್ರಹಿಸಿ ನೆಟ್ಟಿಗರ ಮೆಚ್ಚುಗೆ ಗಿಟ್ಟಿಸಿಕೊಂಡಿದ್ದಾರೆ.
ವೈಥನ್‌ಶೇವ್ ಮೂಲದ 37ರ ಹರೆಯದ ವೆಸ್ಲಿ ಹ್ಯಾಮ್ನೆಟ್ ಧನ ಸಹಾಯ ಮಾಡಲು ತಮ್ಮ ಮಗಳ ಪುಟ್ಟ ಗುಲಾಬಿ ಸೈಕಲ್‌ನಲ್ಲಿ ಗ್ಲ್ಯಾಸ್ಗೋದಿಂದ ಮ್ಯಾಂಚೆಸ್ಟರ್‌ಗೆ ಪ್ರಯಾಣಿಸುವ ಮೂಲಕ ಹಣ ಸಂಗ್ರಹಿಸಿದ್ದಾರೆ. ಆರು ದಿನಗಳಲ್ಲಿ ವೆಸ್ಲಿ 370 ಕಿ.ಮೀ ದೂರದ ಪ್ರಯಾಣವನ್ನು ಪೂರ್ಣಗೊಳಿಸಿದ್ದಾರೆ.
'ಕಳೆದ ವರ್ಷ ನಾನು ನನ್ನ ಪ್ರೀತಿಯ ಅಜ್ಜನನ್ನು ಕಳೆದುಕೊಂಡಿದ್ದೆ. ಇದಾದ ಬಳಿಕ ದಾನಕ್ಕಾಗಿ ಹಣ ಸಂಗ್ರಹಿಸಬೇಕು ಎಂಬ ನಿರ್ಧಾರವನ್ನು ತೆಗೆದುಕೊಂಡಿದ್ದೆ' ಎಂದು ವೆಸ್ಲಿ ಹೇಳಿಕೊಂಡಿದ್ದಾರೆ. ವೆಸ್ಲಿ ಆನ್‌ಲೈನ್ ಮತ್ತು ಆಫ್‌ಲೈನ್ ದೇಣಿಗೆಯ ಮೂಲಕ 6,000 ಪೌಂಡ್ ಅಂದರೆ ಸುಮಾರು 5.61 ಲಕ್ಷ ರೂಪಾಯಿ ಸಂಗ್ರಹಿಸಿದ್ದಾರೆ. ಈ ಹಣ ಚಾರಿಟಿ ಸಂಸ್ಥೆ ಮತ್ತು ವೈಥನ್‌ಶೇವ್‌ನ ಆಸ್ಪತ್ರೆಗೆ ನೀಡಲು ನಿರ್ಧರಿಸಿದ್ದಾರೆ. ಅವರ ಪ್ರಯಾಣದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
PublicNext
23/09/2020 08:17 pm