ನವಲಗುಂದ: ನವಲಗುಂದ ತಾಲ್ಲೂಕಿನಲ್ಲಿ ಕಳೆದ ವಾರದಿಂದ ಸುರಿಯುತ್ತಿರುವ ಮಳೆಗೆ ಹಲವೆಡೆ ಹೆಸರು ಬೆಳೆ ರೈತನ ಸಂತಸಕ್ಕೆ ಕಾರಣವಾಗಿದೆ. ಹೆಸರು ಬೆಳೆ ಸಮೃದ್ಧಿಯಾಗಿ ಬೆಳೆದು ನಿಂತಿದ್ದು, ಈ ಬಾರಿ ಬೆಳೆ ರೈತರ ಕೈ ಹಿಡಿದಿದೆ.
ನವಲಗುಂದ ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಮಳೆ ಉತ್ತಮವಾಗಿ ಆಗುತ್ತಿದೆ. ಇದರಿಂದಾಗಿ ರೈತರು ತಮ್ಮ ಜಮೀನುಗಳಲ್ಲಿ ಬೆಳೆದ ಹೆಸರು ಬೆಳೆ ಸೇರಿದಂತೆ ಹಲವು ಬೆಳೆಗಳು ಈಗ ಮಳೆಯಿಂದ ಸಮೃದ್ಧಿಯಾಗಿ ಬೆಳೆದು ನಿಂತಿವೆ. ಇದರಿಂದ ನವಲಗುಂದ ಭಾಗದ ರೈತರು ಸಂತಸದಲ್ಲಿದ್ದಾರೆ. ಈ ಬಾರಿ ಮಳೆರಾಯ ರೈತನ ಕೈ ಹಿಡಿದಿದ್ದಾನೆ ಎನ್ನಬಹುದು. ಆದರೆ ಕೆಲವೆಡೆ ಪ್ರಮಾಣಕ್ಕಿಂತ ಹೆಚ್ಚು ಸುರಿದ ಮಳೆಯಿಂದ ಬೆಳೆಗಳು ಹಳದಿ ಚುಕ್ಕೆ ರೋಗದ ಭಾದೆಗೆ ತುತ್ತಾಗುತ್ತಿವೆ. ಇದರಿಂದ ರೈತರು ಹೈರಾಣಾಗಿದ್ದಾರೆ.
Kshetra Samachara
11/07/2022 07:18 pm