ನವಲಗುಂದ: ನವಲಗುಂದ ತಾಲೂಕಿನಾದ್ಯಂತ ಗುರುವಾರ ಸಂಜೆಯಿಂದ ಮಳೆರಾಯನ ಆಗಮನವಾಗಿದ್ದು, ಬಿಸಿಲಿನಿಂದ ಕಂಗೆಟ್ಟ ಸಾರ್ವಜನಿಕರ ಮೊಗದಲ್ಲಿ ಮಂದಹಾಸ ಮೂಡಿದ್ರೆ, ರೈತರ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ ಎನ್ನಬಹುದು.
ಈಗಾಗಲೇ ರೈತರು ಸಹ ಮಳೆಯ ನಿರೀಕ್ಷೆಯಲ್ಲಿದ್ದರು. ಬೀಜ ಬಿತ್ತನೆ ಕೆಲಸವನ್ನು ಸಹ ತಾಲ್ಲೂಕಿನ ರೈತರು ಆರಂಭಿಸಿದ್ದರು. ಮಳೆಯ ಆಗಮನದಿಂದ ರೈತರಿಗೂ ಕೃಷಿ ಚಟುವಟಿಕೆಗೆ ನೆರವಾಗಿದೆ.
ಉತ್ತಮ ಬೆಳೆಯ ನಿರೀಕ್ಷೆಯಲ್ಲಿರುವ ರೈತರಿಗೆ ಇನ್ನು ಹೆಚ್ಚಿನ ಮಳೆರಾಯಣ ನಿರೀಕ್ಷೆ ಇದೆ. ಒಟ್ಟಾರೆಯಾಗಿ ಇಷ್ಟು ದಿನ ಬಿಸಿಲಿನ ಬೇಗೆಯಿಂದ ರೋಸಿ ಹೋದ ಜನರಿಗೆ ತಂಪಿನ ಮುದ ನೀಡಿದಂತಾಗಿದ್ದು, ರೈತರಿಗೂ ಮಳೆರಾಯ ಸಂತಸ ತಂದಿದ್ದಾನೆ.
Kshetra Samachara
02/06/2022 07:48 pm