ಹುಬ್ಬಳ್ಳಿ: ನಾಯಕ ಪ್ರಿಯಾಂಕ್ ಪಾಂಚಾಲ್ ಹಾಗೂ ವಿಕೆಟ್ ಕೀಪರ್ ಶ್ರೀಕರ್ ಭರತ್ ಉತ್ತಮ ಬ್ಯಾಟಿಂಗ್ ಸಹಾಯದಿಂದ ಭಾರತದ ಎ ತಂಡವು ನ್ಯೂಜಿಲೆಂಡ್ ಎ ತಂಡದ ವಿರುದ್ಧ ಮೊದಲ ದಿನದ ಆಟದ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 226 ರನ್ ಗಳಿಸಿದೆ.
ನಗರದ ರಾಜನಗರದ KSCA ಮೈದಾನದಲ್ಲಿ ಇಂದು ಆರಂಭಗೊಂಡಿರುವ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಇನ್ನಿಂಗ್ಸ್ ಆರಂಭಿಸಿದ ಭಾರತವು ಊಟದ ವಿರಾಮಕ್ಕೆ ಭಾರತ 19 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 57 ರನ್ ಗಳಿಸಿತ್ತು. ಪಂದ್ಯದ ಮಧ್ಯೆ ಮಳೆರಾಯನ ಕಾಟವು ಹೆಚ್ಚಾಗಿತ್ತು. ಹೀಗಾಗಿ ದಿನದ ಆಟದ ಅಂತ್ಯಕ್ಕೆ 66 ಓವರ್‌ಗಳಲ್ಲಿ ಭಾರತವು 6 ವಿಕೆಟ್ ನಷ್ಟಕ್ಕೆ 226 ರನ್ ಗಳಿಸಿ ನಾಳೆ ಬ್ಯಾಟಿಂಗ್ ಕಾಯ್ದುಕೊಂಡಿದೆ. ಶ್ರೀಕರ್ ಭಾರತ್ (74 ರನ್) ಹಾಗೂ ರಾಹುಲ್ ಚಹಾರ್ (4 ರನ್) ನಾಳೆಗೆ ವಿಕೆಟ್ ಕಾಯ್ದುಕೊಂಡಿದ್ದಾರೆ.
ಭಾರತದ ಎ ತಂಡದ ಪರ ನಾಯಕ ಪ್ರಿಯಾಂಕ್ ಪಾಂಚಾಲ್ 87 ರನ್, ಅಭಿಮನ್ಯು ಈಶ್ವರನ್ 22 ರನ್, ಶಾರ್ದೂಲ್ ಠಾಕೂರ್ 26 ರನ್ ಹಾಗೂ ಶ್ರೀಕರ್ ಭಾರತ್ 74 ರನ್ ಗಳಿಸಿದ್ದಾರೆ. ಇನ್ನು ನ್ಯೂಜಿಲೆಂಡ್ ಎ ತಂಡದ ಪರ ಜಾಕೋಬ್ ಡಫಿ ಹಾಗೂ ಲೋಗನ್ ವ್ಯಾನ್ ಬೀಕ್ ತಲಾ 2 ವಿಕೆಟ್, ರಚಿನ್ ರವೀಂದ್ರ ಹಾಗೂ ಸೀನ್ ಸೋಲಿಯಾ ತಲಾ 1 ವಿಕೆಟ್ ಪಡೆದುಕೊಂಡರು.
ಈರಣ್ಣ ವಾಲಿಕಾರ, ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
09/09/2022 09:13 pm