ಧಾರವಾಡ: 2022 IPL ಆರ್‌ಸಿಬಿ ಪ್ಲೇ ಆಫ್ ತಲುಪಿದ ಬೆನ್ನಲ್ಲೇ ಧಾರವಾಡ ಬಸವನಗರದಲ್ಲಿ ಅಭಿಮಾನಿಗಳು ಸಂಭ್ರಮಚಾರಣೆ ಮುಗಿಲು ಮುಟ್ಟಿತ್ತು. ಹೌದು, ನಿನ್ನೆ ನಡೆದ ಮುಂಬೈ ಹಾಗೂ ಡೆಲ್ಲಿ IPL ಪಂದ್ಯದಲ್ಲಿ ಮುಂಬೈ ಗೆಲುವು ಸಾಧಿಸಿದರೆ ಮಾತ್ರ ಆರ್‌ಸಿಬಿ ಪ್ಲೇ ಆಫ್ ಹೋಗಲು ಸಾಧ್ಯ ಇತ್ತು. ಅದರಂತೆ ಮುಂಬೈ ಗೆಲುವು ಸಾಧಿಸಿದ ಕೂಡಲೇ ರಾತ್ರಿ ಸಮಯದಲ್ಲಿ ಆರ್‌ಸಿಬಿ ಅಭಿಮಾನಿಗಳು ಸಂಭ್ರಮಾಚರಣೆ ನಡೆಸಿದ್ದಾರೆ.
ಧಾರವಾಡದ ಬಸವನಗರದಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ಪ್ಲೇ ಆಫ್ ಹಂತ ತಲುಪಿದ ಕೂಡಲೇ ಜೈ ಆರ್‌ಸಿಬಿ, ಎಂದು ಜೈಕಾರ ಹಾಕಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ನೂರಾರು ಆರ್‌ಸಿಬಿ ಅಭಿಮಾನಿಗಳು ರಸ್ತೆಗೆ ಇಳಿದು ಆರ್‌ಸಿಬಿ ಎನ್ನುತ್ತ ಕುಣಿದು ಅಭಿಮಾನಿಗಳು ಕುಪ್ಪಳಿಸಿದ್ದಾರೆ.
ನಿನ್ನೆ ಮುಂಬೈ ತಂಡ ಗೆಲುವು ಸಾಧಿಸಿದರು, ಡೆಲ್ಲಿ ತಂಡ ಸೋಲು ಕಂಡಿತು. ಡೆಲ್ಲಿ ಹೊರಗೆ ಹೋದರೆ ಮಾತ್ರ ಆರ್‌ಸಿಬಿ ಒಳಗೆ ಎನ್ನುವ ಲೆಕ್ಕಾಚಾರ ಆರ್‌ಸಿಬಿ ಅಭಿಮಾನಿಗಳಿಗೆ ಗೊತ್ತಿತ್ತು. ಮುಂಬೈ ಗೆದ್ದ ಬಳಿಕ RCB ಪ್ಲೇ ಆಫ್ ತಲುಪಿತ್ತು. ನಾವು ಪ್ಲೇ ಆಫ್ ಬಂದರೆ ಈ ಈ ಸಲ ಕಪ್ ನಮ್ಮದೇ ಎನ್ನುತ್ತ ಸಂಭ್ರಮಾಚರಣೆ ನಡೆಸಿದ್ದಾರೆ.
Kshetra Samachara
22/05/2022 09:40 am