ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ನಿಧಾನವಾಗಿ ಬೈಕ್ ಓಡಿಸಿದವರಿಗೆ ಸಿಕ್ತು ನಗದು ಹಣ ಪ್ರಶಸ್ತಿ

ಕುಂದಗೋಳ : ಎಲ್ಲೇಡೆ ವೇಗವಾದ ಓಟಕ್ಕೆ, ವೇಗವಾದ ಆಟಕ್ಕೆ ಪ್ರಶಸ್ತಿ ಪ್ರಶಂಸೆ ಸಿಗುವುದು ಕೇಳಿದ್ದೇವೆ ನೋಡಿದ್ದೇವೆ. ಆದ್ರೇ ಕುಂದಗೋಳ ಪಟ್ಟಣದ ಕಾಳಿದಾಸನಗರದಲ್ಲಿ ತಾಳ್ಮೆಯ ಓಟ ಅಂದ್ರೆ ನಿಧಾನವಾದ ಆಟಕ್ಕೆ ಪ್ರಶಸ್ತಿ ದೊರೆತಿದೆ.

ಕುಂದಗೋಳ ಪಟ್ಟಣದ ಕಾಳಿದಾಸನಗರದ ಮಾರುತಿ ರಥೋತ್ಸವದ ಅಂಗವಾಗಿ ನಡೆದ ನಿಧಾನವಾಗಿ ಬೈಕ್ ಓಡಿಸುವ ಸ್ಪರ್ಧೆಯನ್ನು ಶಿವಾನಂದ ಮಠದ ಸ್ವಾಮಿಗಳು ಬೈಕ್ ಚಲಿಸಿ ಉದ್ಘಾಟಿಸಿ ಸ್ಪರ್ಧಾಳುಗಳಿಗೆ ಹಾರೈಸಿದರು.

ಬಳಿಕ ನಡೆದ ನಿಧಾನವಾಗಿ ಬೈಕ್ ಓಡಿಸುವ ಸ್ಪರ್ಧೆಯಲ್ಲಿ ವಿವಿಧೆಡೆಯಿಂದ ಬಂದು ಭಾಗವಹಿಸಿದ ನೂರಕ್ಕೂ ಅಧಿಕ ಜನರಲ್ಲಿ ಪ್ರಥಮ ಬಹುಮಾನ ಹುಣಸಿಕಟ್ಟಿಯ ಶಿವರಾಜ್ ಹುಂಬಿ, ದ್ವಿತೀಯ ಬಹುಮಾನ ಜಮಖಂಡಿಯ ಎಚ್.ಎಸ್.ಜಳಕಿ, ತೃತೀಯ ಬಹುಮಾನ ಜಮಖಂಡಿ ತಾಲೂಕಿನ ಕುಮಾರಪಾಟೀಲ ಪಡೆದು ವಿಜಯದ ನಗೆ ಬೀರಿದರು.

ಕಾಳಿದಾಸನಗರದ ಮಾರುತಿ ರಥೋತ್ಸವದ ಯುವಕರು ಗುರು ಹಿರಿಯರು ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರ್ವಹಿಸಿ ಮೆಚ್ಚುಗೆ ಪಡೆದರು.

Edited By : Shivu K
Kshetra Samachara

Kshetra Samachara

20/04/2022 11:47 am

Cinque Terre

48.2 K

Cinque Terre

0

ಸಂಬಂಧಿತ ಸುದ್ದಿ