ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಳ್ನಾವರ: ಎಪಿಎಲ್ ನಲ್ಲಿ ದಾಖಲೆಯ ರನ್:ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನ

ಅಳ್ನಾವರ: ವಯಕ್ತಿಕವಾಗಿ ಅತಿ ಹೆಚ್ಚು ರನ್ ಬಾರಿಸುವುದರ ಮೂಲಕ ಆದರ್ಶ ಬಿಗ್ ಡ್ಯಾಡಿ ಪಂದ್ಯದ ಆಟಗಾರ ಯಶ್ ಕಲಾಲ್ ಅವರು ದಾಖಲೆ ನಿರ್ಮಿಸಿದ್ದಾರೆ.

ತಾಲೂಕು ಮಟ್ಟದ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಾಗರಾಜ ಅಣ್ಣಾ ಛಬ್ಬಿ ಟ್ರೋಫಿ ಅಳ್ನಾವರ ಪ್ರೀಮಿಯರ್ ಲೀಗ್ ನಲ್ಲಿ ಎದುರಾಳಿ ತಂಡ ಕಂಬಾರಗಣವಿ ನೈಟ್ ರೈಡರ್ಸ್ ವಿರುದ್ಧ ಕೇವಲ 37 ಬಾಲ್ ನಲ್ಲಿ 108 ರನ್ ಬಾರಿಸುವುದರ ಮೂಲಕ ಯಶ್ ಕಲಾಲ್ ಅವರು ದಾಖಲೆ ನಿರ್ಮಿಸಿದ್ದಾರೆ.

ಕಳೆದ ರವಿವಾರ ದಿಂದ ನಡೆಯುತ್ತಿರುವ ಅಳ್ನಾವರ ಪ್ರೀಮಿಯರ್ ಲೀಗ್ ನಲ್ಲಿ ಒಟ್ಟು 8 ತಂಡಗಳು ಭಾಗಿ ಯಾಗಿದ್ದು ಪ್ರತಿಯೊಂದು ತಂಡ 6 ಪಂದ್ಯಗಳನ್ನ ಆಡಬೇಕಿದೆ.ಈವರೆಗೆ ಒಟ್ಟು 17 ಪಂದ್ಯಗಳು ನಡೆದಿದ್ದು ಇದುವರೆಗೂ ನಡೆದ ಪಂದ್ಯದಲ್ಲೂ ಆದರ್ಶ್ ಬಿಗ್ ಡ್ಯಾಡಿ ತಂಡವೇ 10 ಓವರ್ ನಲ್ಲಿ 135 ರನ್ ಬಾರಿಸುವುದರ ಮೂಲಕ ಅತಿ ಹೆಚ್ಚು ರನ್ ಬಾರಿಸಿದ ತಂಡವಾಗಿ ಹೊರಹೊಮ್ಮಿದೆ.

ಕೇವಲ 37 ಬಾಲ್ ನಲ್ಲಿ 108 ರನ್ ಬಾರಿಸಿ ಪಂದ್ಯ ಶ್ರೇಷ್ಟ ಪ್ರಶಸ್ತಿಗೆ ಯಶ್ ಕಲಾಲ್ ಅವರು ಬಾಜನ ರಾದರು.ಪ,ಪಂ ಸದಸ್ಯರಾದ ವಿನಾಯಕ ಕುರಬರ ಅವರು ನಾಗರಾಜ ಛಬ್ಬಿ ಟ್ರೋಫಿ ನೀಡಿ ಗೌರವಿಸಿದರು.

Edited By :
Kshetra Samachara

Kshetra Samachara

10/03/2022 04:02 pm

Cinque Terre

10.14 K

Cinque Terre

0

ಸಂಬಂಧಿತ ಸುದ್ದಿ