ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಪಿಬಿಟಿ ಕ್ಲಬ್ ಹೊನಲು ಬೆಳಕಿನ ಕಬಡ್ಡಿ ಟ್ರೋಫಿಗೆ ಮುತ್ತಿಟ್ಟ ಜಮಖಂಡಿ ತಂಡ

ಸದಾ ಕ್ರೀಡಾ ಚಟುವಟಿಕೆಗಳಿಗೆ ಸ್ಫೂರ್ತಿ ತುಂಬುವ ಕ್ರೀಡಾಕೂಟ ಆಯೋಜಿಸುವ ಪಟ್ಟಣದ ಪಿಬಿಟಿ ಕ್ಲಬ್ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಏರ್ಪಡಿಸಿ ಪ್ರಶಸ್ತಿ ಪ್ರಧಾನ ಮಾಡಿದೆ.

ಕ್ಯಾಪ್ಟನ್ ಪರಶುರಾಮಭಾವು ಟೆನಿಸ್ ಮತ್ತು ರಿಕ್ರಿಯೆಶನ್ ಕ್ಲಬ್ ನಡೆಸಿದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯಲ್ಲಿ 25ಕ್ಕೂ ಅಧಿಕ ತಂಡಗಳು ಭಾಗವಹಿಸಿ ಪ್ರಶಸ್ತಿ ಸುತ್ತಿಗೆ ಸೆಣಸಾಡಿದವು. ರೋಚಕತೆ ನಡುವೆ ರಾತ್ರಿ ಇಡೀ ನಡೆದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಬಹುಮಾನ ಸಿದ್ದು ನ್ಯಾಮಗೌಡರ ಸ್ಪೋರ್ಟ್ ಕ್ಲಬ್ ಜಮಖಂಡಿ, ದ್ವೀತಿಯ ಬಹುಮಾನ ಜೈ ಹನುಮಾನ್ ತಂಡ ಹಿರೇನೆರ್ತಿ, ತೃತೀಯ ಬಹುಮಾನ ವಿಜಯ ಮಾಂತೇಶ್ವರ ತಂಡ ಹಿರೇ ಮ್ಯಾಗೇರಿ, ಚತುರ್ಥ ಬಹುಮಾನವನ್ನು ಸ್ವಾಮಿ ವಿವೇಕಾನಂದ ತಂಡ ಸಂಶಿ ಪಡೆದವು.

ಈ ಕಾರ್ಯಕ್ರಮಕ್ಕೆ ಮುಖಂಡ ಶಿವಾನಂದ ಬೆಂತೂರು, ಜೆಡಿಎಸ್ ಮುಖಂಡ ಹಜರತ್'ಅಲಿ ಜೋಡಮನಿ, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಸುರೇಶ್ ಗಂಗಾಯಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಉಮೇಶ್ ಹೆಬಸೂರ ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ, ಚತುರ್ಥ ಬಹುಮಾನ ನೀಡಿದರೇ ಕಾಂಗ್ರೆಸ್ ಯುವ ಮುಖಂಡ ಶಕ್ತಿಪ್ರಸಾದ್ ಅಕ್ಕಿ ಉದ್ಘಾಟನಾ ಪಂದ್ಯದ ಬಹುಮಾನ ನೀಡಿದರು.

Edited By :
Kshetra Samachara

Kshetra Samachara

15/02/2022 11:37 am

Cinque Terre

31.05 K

Cinque Terre

0

ಸಂಬಂಧಿತ ಸುದ್ದಿ