ಹುಬ್ಬಳ್ಳಿ : ನಗರದ ಶ್ರೀ ಸದ್ಗುರು ಚೆಸ್ಮಾರ್ಟ್ಜ್ ಮತ್ತು ಮ್ಯೂಸಿಕ ಅಕಾಡೆಮಿ ಹಾಗೂ ರಾಮಕೃಷ್ಣ-ವಿವೇಕಾನಂದ ಆಶ್ರಮ ಸಂಯುಕ್ತ ಆಶ್ರಯದಲ್ಲಿ
ಫೆ. 27 ರಂದು 21 ವರ್ಷ ವಯೋಮಿತಿಯ ಮುಖ್ಯ ವಿಭಾಗದ ಸ್ಪರ್ಧೆ ಹಾಗೂ ಫೆ. 28 ರಂದು ಮುಕ್ತ ವಿಭಾಗದ ಸ್ಪರ್ಧೆಗಳು ನಡೆಯಲಿವೆ.
ಸ್ಥಳ : ರಾಮಕೃಷ್ಣ ವಿವೇಕಾನಂದ ಆಶ್ರಮ ಕಲ್ಯಾಣ ನಗರ. ಒಟ್ಟು ನಗದು ಬಹುಮಾನದ ಮೊತ್ತ 40,000 ಆಗಿದ್ದು ಜೊತೆಗೆ ಅತ್ಯಾಕರ್ಷಕ ಟ್ರೋಫಿ, ಶೀಲ್ಡ್, ಪದಕ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು.
ಎರಡು ದಿನದ ವಿಭಾಗಗಳಲ್ಲಿ 10/ 13 / 15 ವರ್ಷದ ಬಾಲಕ ಬಾಲಕಿಯರಿಗೆ ತಲಾ 10 ಬಹುಮಾನಗಳನ್ನು ನೀಡಲಾಗುವುದು. ಭಾಗವಹಿಸಿದ ಎಲ್ಲ ಸ್ಪರ್ಧಾಗಳುಗಳಿಗೆ ಪ್ರಮಾಣ ಪತ್ರ ನೀಡಲಾಗುವುದು. ಆಸಕ್ತರು ಎರಡು ದಿನಗಳ ಪಂದ್ಯದಲ್ಲಿ ಈ ಕೆಳಕಂಡ ಮೊಬೈಲ್ ಸಂಖ್ಯೆ ಮೂಲಕ ನೊಂದಾಯಿಸಲು ಅಕಾಡೆಮಿಯ ಮುಖ್ಯಸ್ಥೆ ಶ್ರೀಮತಿ ಅರ್ಚನಾ ನಾಯಕ ಹಾಗೂ ವ್ಯವಸ್ಥಾಪಕ ನಾಗಲಿಂಗ ಮುರಗಿ ವಿನಂತಿಸಿದ್ದಾರೆ 8762191789/8431737265.
Kshetra Samachara
21/02/2021 10:06 am