ಕುಂದಗೋಳ : ತಾಲೂಕಿನ ಸಂಶಿ ಗ್ರಾಮದ ನ್ಯೂ ಸ್ಪೋರ್ಟ್ಸ್ ಕ್ಲಬ್ ಹಾಗೂ ಧಾರವಾಡ ಜಿಲ್ಲಾ ಅಮೇಚೂರ್ ಸಂಸ್ಥೆಯ ಸಹಯೋಗದಲ್ಲಿ ಅಂತರ ಜಿಲ್ಲಾ ಆಹ್ವಾನಿತ ಖೋ ಖೋ ಪಂದ್ಯಾವಳಿಗಳನ್ನು ಎರ್ಪಡಿಸಲಾಗಿದೆ. ಫೆ.21 ರಂದು ಬೆಳಿಗ್ಗೆ 10 ಗಂಟೆಗೆ ಸ್ಥಳೀಯ ಶ್ರೀ ಪಕೀರ ಶಿವಯೋಗಿಶ್ವರ ಪ್ರೌಢಶಾಲೆ ಆವರಣದಲ್ಲಿ ಖೋಖೋ ತಂಡಗಳನ್ನು ಆಯ್ಕೆ ಮಾಡಲಾಗುವುದು.
ಖೋಖೋ ಕ್ರೀಡೆಯಲ್ಲಿ ಭಾಗವಹಿಸಲು ಇಚ್ಚಿಸುವ ಕ್ರಿಡಾಪಟುಗಳು ಭಾವಚಿತ್ರ, ಆಧಾರಕಾರ್ಡ್ ಮೂಲ ಪ್ರತಿ ಜೊತೆಗೆ ಸ್ಥಳಕ್ಕೆ ಧಾರವಾಡ ಜಿಲ್ಲೆಯ ಕ್ರಿಡಾಪಟುಗಳು ಮಾತ್ರ ಹಾಜರಾಗಬೇಕು. ಹೆಚ್ಚಿನ ಮಾಹಿತಿಗಾಗಿ 9743947043 ಅಥವಾ 9740375084 ಮೊಬೈಲ್ ಸಂಖ್ಯೆಗೆ ಸಂಪರ್ಕಿಸಬಹುದು.
Kshetra Samachara
18/02/2021 12:42 pm