ನವಲಗುಂದ : ಭಾರತೀಯ ಜನತಾ ಪಾರ್ಟಿ ಮತ್ತು ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ವತಿಯಿಂದ ಶನಿವಾರ ಪಟ್ಟಣದ ಕುಂಬಾರ ಓಣಿಯಲ್ಲಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮದಿನಾಚರಣೆ ಅಂಗವಾಗಿ ಶಿಡಿ ಕಲ್ಲು ಎತ್ತುವ ಶಕ್ತಿ ಪ್ರದರ್ಶನ ಆಯೋಜಿಸಲಾಗಿತ್ತು.
ಸುಭಾಷ್ ಚಂದ್ರ ಬೋಸ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಾಜಿ ಪೈಲ್ವಾನ ಮತ್ತು ಯುವ ಮೋರ್ಚಾ ಪಧಾದಿಕಾರಿಗಳಿಂದ ಶಿಡಿ ಕಲ್ಲು ಎತ್ತುವ ಶಕ್ತಿ ಪ್ರದರ್ಶನ ಮೂಲಕ ರಾಷ್ಟ್ರೀಯ ಪರಾಕ್ರಮ ದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಜಪಾ ತಾಲೂಕಿನ ಅಧ್ಯಕ್ಷರು ದಾನಪ್ಪಗೌಡ್ರ, ಭಾಜಪಾ ನಗರ ಘಟಕದ ಅಧ್ಯಕ್ಷ ಅಣ್ಣಪ್ಪ ಬಾಗಿ ಹಾಗೂ ಹಿರಿಯರಾದ ರಾಯನಗೌಡ್ರ ಪಾಟೀಲ್ ಹಾಗೂ ಕುಂಬಾರ ಓಣಿ ಹಿರಿಯರು ಉಪಸ್ಥಿತರಿದ್ದರು.
Kshetra Samachara
24/01/2021 07:52 pm