ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಇಂದಿನಿಂದ ಬಿ.ಜಿ.ಎ.ಮೈದಾನದಲ್ಲಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿ

ಹುಬ್ಬಳ್ಳಿ- ಹದಿಮೂರು ವರ್ಷಕ್ಕಿಂತ ಕಿರಿಯರಿಗಾಗಿ ಶ್ರೀ ದುರ್ಗಾ ಡೆವಲಪರ್ಸ್ ಟ್ರೋಫಿ ಆಹ್ವಾನ ಅಂತರ - ಕ್ಯಾಂಪ್ ಕ್ರಿಕೆಟ್ ಪಂದ್ಯಾವಳಿ ನಗರದ ಬಿ.ಜಿ. ಅಸೋಸಿಯೇಟ್ಟಿ ಆಶ್ರಯದಲ್ಲಿ ಇಲ್ಲಿಯ ಬಿ.ಜಿ.ಎ.ಮೈದಾನದಲ್ಲಿ ಶನಿವಾರದಿಂದ ಪ್ರಾರಂಭವಾಗದೆ.

ಒಟ್ಟು 24 ತಂಡಗಳು ಲೀಗ್ - ಕಮ್ - ನಾಕ್ ಔಟ್ ಆಧಾರದ ಮೇಲೆ ನಡೆಯಲಿರುವ ಈ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದ್ದು , ಅವನ್ನು ಆರು ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಸ್ಪೋರ್ಟ್ಸ್ ಅಕಾಡೆಮಿ ಗದಗ , ಯೂನಿಯನ್ ಜಿಮ್ಖಾನಾ ಬೆಳಗಾವಿ , ಅರಿಸ್ಟೋಕ್ರಾಟ್ ಕ್ರಿಕೆಟ್ ಕ್ಲಬ್ ಬಳ್ಳಾರಿ ಹಾಗೂ ಇಜೇರಿ ಕ್ರಿಕೆಟ್ ಅಕಾಡೆಮಿ ವಿಜಯಪುರ ತಂಡಗಳು ' ಎ ' ಗುಂಪಿನಲ್ಲಿದ್ದರೆ , ಗದಗ ಕ್ರಿಕೆಟ್ ಕ್ಲಬ್ , ಧಾರವಾಡದ ವಸಂತ ಮುರ್ಡೇಶ್ವರ ಕ್ರಿಕೆಟ್ ಅಕಾಡೆಮಿ , ಬೆಳಗಾವಿಯ ಆನಂದ ಕ್ರಿಕೆಟ್ ಅಕಾಡೆಮಿ ಹಾಗೂ ಎಸ್.ಎನ್.ಎ.ಸಿ. ಸಾವಂತವಾಡಿ ತಂಡಗಳು ' ಬಿ ' ಗುಂಪಿನಲ್ಲಿವೆ . ಎಮ್.ಸಿ.ಸಿ.ಸಿ.ಬೆಳಗಾವಿ , ಅರಿಸ್ಟೋಕ್ರಾಟ್ ಸೆಕ್ರೆಟರಿ ಕ್ಲಬ್ , ಚಾಂಪಿಯನ್ಸ್ ನೆಟ್ ಅಕಾಡೆಮಿ ಹುಬ್ಬಳ್ಳಿ ಹಾಗೂ ದುರ್ಗಾ ಸ್ಪೋರ್ಟ್ಸ್ ಅಕಾಡೆಮಿ , ಹುಬ್ಬಳ್ಳಿ ( ಸಿ ಗುಂಪು ) , ಹುಬ್ಬಳ್ಳಿ ಕ್ರಿಕೆಟ್ ಅಕಾಡೆಮಿ , ಬೆಳಗಾವಿ ಸ್ಫೋಟ್ಸ್ ಕ್ಲಬ್ , ಓಮ್ ಕ್ರಿಕೆಟ್ ಅಕಾಡೆಮಿ ವಿಜಯಪುರ ಹಾಗೂ ಫಸ್ಟ್ ಕ್ರಿಕೆಟ್ ಅಕಾಡೆಮಿ ಧಾರವಾಡ ( ಡಿ ಗುಂಪು ) , ಬಿ.ಡಿ.ಕೆ.ಕೋಲ್ಸ್ ( ಎ ) , ರತ್ನಾಗಿರಿ ಕ್ರಿಕೆಟ್ ಅಕಾಡೆಮಿ ಚಿಕ್ಕಮಗಳೂರು , ಕೆ.ಸಿ.ಸಿ.ಸಿ. ವಿಜಯಪುರ ಹಾಗೂ ಪೂರ್ವಿಕಾ ಕ್ರಿಕೆಟ್ ಆಕಾಡೆಮಿ , ನೆಲಮಂಗಲ , ಬೆಂಗಳೂರು ( ಇ ಗುಂಪು ) ಹಾಗೂ ಬಿ.ಡಿ.ಕೆ.ಕೋಲ್ಸ್ ( ಬಿ ) , ಕ್ರಿಕೆಟ್ ಅಕಾಡೆಮಿ ಶಹಾಬಾದ , ವಿ.ಸಿ.ಎ. ಬೆಳಗಾವಿ ಹಾಗೂ ಆಸ್ತಿ ಕ್ರಿಕೆಟ್ ಫೌಂಡೇಶನ್ ಧಾರವಾಡ ( ಎಫ್ ಗುಂಪು ) ಇನ್ನಿತರ ತಂಡಗಳಾಗಿವೆ. ಲೋಕಾಯುಕ್ತ ಎಸ್.ಪಿ.ಯಾಗಿರುವ ಎಚ್ . ಕೆ.ಪಠಾಣ , ಶ್ರೀ ದುರ್ಗಾ ಡೆವಲಪರ್ಸ್ ಮಾಲಕ ಹನುಮಂತಪ್ಪಾ ಮ್ಯಾಗೇರಿ ಹಾಗೂ ಬಿ.ಡಿ.ಕೆ. ಸ್ಪೋರ್ಟ್ಸ್ ಫೌಂಡೇಶನ್ ಟ್ರಸ್ಟಿ ಬಾಬಾ ಭೂಸದ, ರಾಜಶೇಖರ ಪಾಟೀಲ್, ಶಿವಾನಂದ ಗುಂಜಾಳ, ನಿಖಿಲ್ ಭುಸದ, ಪವನ ಗಂಗಾವತಿ, ಬಿ.ಜಿ.ಎ. ಮೈದಾನದಲ್ಲಿ ಪಂದ್ಯಾವಳಿಯನ್ನು ಉದ್ಘಾಟಿಸಿದ್ದಾರೆ....

Edited By : Nagesh Gaonkar
Kshetra Samachara

Kshetra Samachara

16/01/2021 08:52 pm

Cinque Terre

21.75 K

Cinque Terre

0

ಸಂಬಂಧಿತ ಸುದ್ದಿ