ಹುಬ್ಬಳ್ಳಿ : ಆ ಜಾತ್ರೆ ತನ್ನದೇ ಆದಂತಹ ಐತಿಹಾಸಿಕ ಹಿನ್ನೆಲೆ ಹೊಂದಿದೆ, ಈ ಜಾತ್ರೆಗೆ ಜಗ ಜಟ್ಟಿಗಳೆಲ್ಲ ಆಗಮಿಸಿ ತಮ್ಮ ಶಕ್ತಿ ಪ್ರದರ್ಶನ ನೀಡಿದ್ದಾರೆ, ಆ ಜಾತ್ರೆ ಸಾಂಸ್ಕೃತಿಕ ಹಾಗೂ ಜಾನಪದ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವಂತದು ಹಾಗಿದ್ರೇ ಯಾವುದು ಆ ಜಾತ್ರೆ ಅಂತೀರಾ ? ಹಾಗಿದ್ರೇ ಈ ಸ್ಟೋರಿ ನೋಡಿ.
ಹೌದು ! ಹುಬ್ಬಳ್ಳಿಯ ಗೋಕುಲ ಗ್ರಾಮದ ಧಾರವತಿ ಆಂಜನೇಯನ ಜಾತ್ರೆಯ ಅಂಗವಾಗಿ ನಡೆದ ಬಯಲು ಕುಸ್ತಿ ಸ್ಪರ್ಧೆಯಲ್ಲಿ ಪೈಲ್ವಾನರ ಜಿದ್ದಾ ಜಿದ್ದಿಗೆ ಪ್ರೇಕ್ಷಕರು ಪುಲ್ ಫಿದಾ ಆಗಿದ್ದಾರೆ.
ಕೋವಿಡ್ ಕಾರಣ ಕಳೆದ ಎರೆಡು ವರ್ಷಗಳಿಂದ ಮಂಕಾಗಿದ್ದ ದಾರಾವತಿ ಆಂಜನೇಯ ಜಾತ್ರೆಯಲ್ಲಿ ಈ ವರ್ಷ ನಡೆದ ಬಹು ಜಿದ್ದಾಜಿದ್ದಿನ ಕುಸ್ತಿ ಪಂದ್ಯಾವಳಿಗೆ ಸಾವಿರಾರು ಕುಸ್ತಿ ಪಟುಗಳು ಸಾಕ್ಷಿಯಾದರು.
ಧಾರವಾಡ, ಉತ್ತರ ಕನ್ನಡ, ಬೆಳಗಾವಿ ಸೇರಿದಂತೆ ರಾಜ್ಯ ಹಾಗೂ ನೆರೆ ರಾಜ್ಯಗಳ ಕುಸ್ತಿ ಪಟುಗಳು ಹಾಕಿದ ಪಟ್ಟುಗಳು ಗಮನ ಸೆಳೆದವು, ಎಂಟು ವರ್ಷದ ಬಾಲಕರಿಂದ ಹಿಡಿದು ಪುರುಷರ ತನಕ ವಿವಿಧ ವಯೋಮಾನದ ಪೈಲ್ವಾನರಿಗೆ ಸ್ಪರ್ಧೆಗಳು ನಡೆದವು.
ಮೊದಲ ನಾಲ್ಕು ಸಂಖ್ಯೆಗಳ ಕುಸ್ತಿಯ ವೇಳೆ ಸ್ಪರ್ಧಿ ಹಾಗೂ ಪ್ರತಿಸ್ಪರ್ಧಿ ಗೆಲುವಿಗಾಗಿ ಹೋರಾಟ ಮಾಡುತ್ತಿದ್ದಾಗ ಜನ ಚಪ್ಪಾಳೆ ಹೊಡೆದು ಸಂಭ್ರಮಿಸಿದರು, ಪಂದ್ಯದಲ್ಲಿ ಯಶ್ವಂತ್ ಮೈಸೂರು ಎಂಬ ಕುಸ್ತಿ ಪಟು ಗೆಲುವು ಸಾಧಿಸಿ ಬೆಳ್ಳಿ ಗದೆ ಪಡೆದರು.
ಇನ್ನೂ ಗೋಕುಲ ಗ್ರಾಮದ ಹಿರಿಯ ಪೈಲ್ವಾನರು ಹಾಗೂ ಕುಸ್ತಿ ಪ್ರೇಮಿಗಳು ತಮ್ಮ ಕುಟುಂಬದ ಹಿರಿಯರ ಹೆಸರಿನಲ್ಲಿ ಪಂದ್ಯಗಳನ್ನು ಕಟ್ಟಿದರು. ಈ ಪ್ರತಿ ಸ್ಪರ್ಧೆಗಳು ರಂಗೇರಿದ್ರೇ ಇಂತಹ ಸಾಹಸಿಕ ಕ್ರೀಡೆಗಳಿಗೆ ಸಾಕ್ಷಿಯಾಗಿರುವ ಆಂಜನೇಯನ ಜಾತ್ರೆಗೆ ಸಿಎಂ ಬಸವರಾಜ ಬೊಮ್ಮಾಯಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಚಾಲನೆ ನೀಡಿದ ಬಳಿಕ ಮತ್ತಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಾಕ್ಷಿಯಾದ ಜಾತ್ರೆಯಲ್ಲಿ ಕುಸ್ತಿ ಪಟುಗಳು ತಮ್ಮ ಆಟದ ವೈಖರಿಯ ಮೂಲಕ ಜನ ಮನಸೂರೆಗೊಂಡರು.
Kshetra Samachara
18/05/2022 12:15 pm