ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಯೋಗ ಸಾಧನೆಗೆ ಚೈತ್ರಾ ಹೆಸರುವಾಸಿ-ಪ್ರಶಸ್ತಿ ಗೆಲ್ಲೋದು ಪಕ್ಕಾ !

ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ

ಕುಂದಗೋಳ : ಈ ಹುಡುಗಿಗೆ ವಯಸ್ಸು ಇನ್ನೂ ಕೇವಲ ಹದಿನೈದು. ಆದರೆ ಇವಳ ಸಾಧನೆ ರಾಜ್ಯ, ಅಂತರಾಜ್ಯ, ಅಂತರಾಷ್ಟ್ರಮಟ್ಟಕ್ಕೆ ಸವಾಲೆಸುವಂತಹದು.

ಅರೆ,! ಯಾರು ಈ ಹುಡುಗಿ. ಏನು ಸಾಧನೆ ಅಂದ್ರಾ ? ಹೀಗೆ ಮೈಯಲ್ಲಿನ ಮೂಳೆ ಬಾಗಿಸಿ ಯೋಗದ ಪ್ರತಿ ಆಸನವನ್ನು ಲೀಲಾಜಾಲವಾಗಿ ಮಾಡುವ ಈಕೆ ಚೈತ್ರಾ ಡೊಳ್ಳಿನ, ಕುಂದಗೋಳ ತಾಲೂಕಿನ ಪಶುಪತಿಹಾಳ ಗ್ರಾಮದವಳು.

ಸದ್ಯ ಕುಂದಗೋಳ ಪಟ್ಟಣದ ಹರಭಟ್ಟ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಈ ವಿದ್ಯಾರ್ಥಿನಿ, ಹುಬ್ಬಳ್ಳಿಯಲ್ಲಿ ನಡೆದ ಸರ್ಕಾರಿ ಜಿಲ್ಲಾ ಮಟ್ಟದ ಯೋಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು, ರಾಜ್ಯಮಟ್ಟಕ್ಕೆ ಆಯ್ಕೆ ಆಗಿದ್ದಾಳೆ. ಹಾಗಂತ ಈಕೆ ಮೊದಲ ಬಾರಿ ರಾಜ್ಯಮಟ್ಟ ಪ್ರತಿನಿಧಿಸುತ್ತಿಲ್ಲಾ, ಈಗಾಗಲೇ ರಾಜ್ಯ ಓಲಿಂಪಿಯೋ, ಅಂತಾರಾಷ್ಟ್ರೀಯ ಓಪನ್ ಟೂರ್ನಾಮೆಂಟ್ ಸೇರಿದಂತೆ ಹಲವಾರು ಸ್ಪರ್ಧೆ ಜಯಿಸಿ, ಇದೀಗ ಈ ರಾಜ್ಯಮಟ್ಟದ ಸ್ಪರ್ಧೆಗೂ ಸೈ ಎನ್ನಲು ಸಿದ್ದಳಾಗಿದ್ದು ಶಿಕ್ಷಕರು ಪ್ರೋತ್ಸಾಹ ತುಂಬಿದ್ದಾರೆ.

ಇನ್ನೂ ಮೂಲತಃ ಬಡ ಕುಟುಂಬದಲ್ಲಿ ಜನಿಸಿದ ಈ ವಿದ್ಯಾರ್ಥಿನಿ, ತಂದೆ ಕಿರಾಣಿ ಅಂಗಡಿ ನಡೆಸಿದ್ರೇ, ತಾಯಿ ಕೃಷಿ ಕೂಲಿ ಕೆಲಸ ಮಾಡ್ತಾರೆ. ಪ್ರಾಥಮಿಕ ಶಾಲಾ ಹಂತದಲ್ಲೇ ಇವಳ ಯೋಗ ಸಾಧನೆಗೆ ಎಲ್ಲೆಡೆ ವೇದಿಕೆ, ಚಪ್ಪಾಳೆ, ಶಿಳ್ಳೆ, ಪ್ರಶಸ್ತಿ, ಪ್ರಮಾಣಪತ್ರಕ್ಕಿಂತ ಮಿಗಿಲಾಗಿ ಹೆತ್ತವರಿಗೆ ಗೌರವ ತಂದಿದ್ದಾಳೆ.

ಒಟ್ಟಾರೆ ಅತಿ ಕಿರಿಯ ವಯಸ್ಸಿನಲ್ಲೆ ಈ ಹಂತದ ಯೋಗ ಸಾಧನೆ ಗೈದ ಹುಡುಗಿ ಈ ಚೈತ್ರಾ ಡೊಳ್ಳಿನ. ಮುಂದೊಂದು ದಿನ ಅಂತಾರಾಷ್ಟ್ರೀಯ ಮಟ್ಟದ ಪ್ರಬಲ ಯೋಗ ಸ್ಪರ್ಧಿ ಎನ್ನುವುದರಲ್ಲಿ ಸಂಶಯ ಇಲ್ಲಾ ಬಿಡಿ.

Edited By : Manjunath H D
Kshetra Samachara

Kshetra Samachara

08/07/2022 09:52 pm

Cinque Terre

40.54 K

Cinque Terre

2

ಸಂಬಂಧಿತ ಸುದ್ದಿ