ಧಾರವಾಡ: ಮರಾಠಾ ವಿದ್ಯಾಪ್ರಸಾರಕ ಮಂಡಳದ ವತಿಯಿಂದ ಸಮಾಜದ ಬಡ ವಿದ್ಯಾರ್ಥಿನಿ ಅಂತಾರಾಷ್ಟ್ರೀಯ ಕ್ರೀಡಾಪಟು ಪ್ರಿಯಾಂಕಾ ಓಲೇಕಾರಗೆ ಸನ್ಮಾನಿಸಿ ಗೌರವಿಸಿದರು.
ಈ ವಿದ್ಯಾರ್ಥಿನಿ ಇದೆ ತಿಂಗಳಿನಲ್ಲಿ ಪ್ರಾನ್ಸ್‌ನಲ್ಲಿ ನಡೆಯುವ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾಳೆ. ಹೀಗಾಗಿ ಆರ್ಥಿಕವಾಗಿ ಹಿಂದುಳಿದವರಾಗಿದ್ದು, ಈ ಉದ್ದೇಶದಿಂದ ಮರಾಠಾ ವಿದ್ಯಾಪ್ರಸಾರಕ ಮಂಡಳದ ವತಿಯಿಂದ ಗೌರವ ಧನವಾಗಿ 25,000ರೂ ಚೆಕ್ ನೀಡಿ ಸನ್ಮಾನಿಸಿದರು.
ಇನ್ನು ಅಥ್ಲೆಟಿಕ್ ಕ್ರೀಡಾ ಕೂಟಕ್ಕೆ ಆಯ್ಕೆಯಾದ ಪ್ರಿಯಾಂಕಾ ಅವರ ತರಬೇತುದಾರದ ಎಸ್. ಭೀಮಣ್ಣನವರ ಅವರನ್ನು ಮರಾಠಾ ವಿದ್ಯಾಪ್ರಸಾರಕ ಮಂಡಳಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಮರಾಠ ಮಂಡಳದ ಅಧ್ಯಕ್ಷ ಮನೋಹರ ಎನ್ ಮೋರೆ. ಉಪಾಧ್ಯಕ್ಷ ಯಲ್ಲಪ್ಪ ಚವ್ಹಾಣ. ಕಾರ್ಯಾಧ್ಯಕ್ಷ ಸುಭಾಸ ಸೇರಿದಂತೆ ಇತರೆ ಗಣ್ಯರು ವೈಯಕ್ತಿಕವಾಗಿ ಧನ ಸಹಾಯ ನೀಡಿದರು.
Kshetra Samachara
03/05/2022 04:15 pm