ಅಣ್ಣಿಗೇರಿ: ಆಧುನಿಕ ಜಗತ್ತಿನಲ್ಲಿ ಸಾಹಸ ಕ್ರೀಡೆಗಳು ಕಣ್ಮರೆಯಾಗುತ್ತಿವೆ. ಇಂತಹ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ಕೆಲಸ ಧಾರವಾಡ ಜಿಲ್ಲೆ ಅಣ್ಣಿಗೇರಿ ತಾಲೂಕಿನ ಶಲವಡಿ ಗ್ರಾಮದಲ್ಲಿ ನಡೆಯುತ್ತಿದೆ.
ಶಲವಡಿ ಗ್ರಾಮದ ಜೈಂಟ್ಸ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರು ನೋಡುಗರ ಹುಬ್ಬೆರಿಸುವಂತೆ ಹಗ್ಗದ ಮಲ್ಲಗಂಬ ಪ್ರದರ್ಶನ ನೀಡಿದರು. ಈ ಸಾಹಸ ಪ್ರದರ್ಶನಕ್ಕೆ ದೇಸಾಯಿಪೇಟೆ ಓಣಿಯ ಕಾಮಣ್ಣನ ಚಾವಡಿ ಉತ್ತಮ ವೇದಿಕೆ ಕಲ್ಪಿಸಿತು.
ಕಾಮಣ್ಣನ ಪ್ರತಿಷ್ಠಾಪನೆಯಾದ ಐದನೇ ದಿನವಾದ ಶುಕ್ರವಾರ ಹಗ್ಗದ ಮಲ್ಲಗಂಬ ಹಾಗೂ ರೋಣ ತಾಲೂಕು ಹಿರೇಮಣ್ಣೂರು ಗ್ರಾಮದ ಶ್ರೀ ನೀಲಕಂಠೇಶ್ವರ ಜನಪದ ಕಲಾ ತಂಡವು ಕಲಾ ಪ್ರದರ್ಶನ ನೀಡಿದರು.
ಇನ್ನೂ ಮಲ್ಲಗಂಬ ಪ್ರದರ್ಶನ ನೀಡಿದ ವಿದ್ಯಾರ್ಥಿನಿಯರಿಗೆ ಜೈಂಟ್ಸ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ವಿ.ಬಿ. ಸಾಂಬ್ರಾಣಿ ಹಾಗೂ ನವಲಗುಂದ ಆರೋಗ್ಯ ಇಲಾಖೆ ಸಿಬ್ಬಂದಿ ಉಮೇಶ್ ಬಳಿಗೇರ ಅವರು ತರಬೇತಿ ನೀಡಿದ್ದಾರೆ. ಈ ವಿದ್ಯಾರ್ಥಿನಿಯರ ತಂಡವು ಧಾರವಾಡ ಜಿಲ್ಲೆ ಅಷ್ಟೇ ಅಲ್ಲದೆ ವಿವಿಧ ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ಪ್ರದರ್ಶನ ನೀಡುತ್ತಿರುವುದು ಗ್ರಾಮಕ್ಕೆ ಹೆಮ್ಮೆ ತಂದಿದೆ ಎನ್ನುತ್ತಾರೆ ಗ್ರಾಮದ ಹಿರಿಯರಾದ ರುದ್ರಪ್ಪ ಹಳ್ಳಿ.
ನಂದೀಶ್ ಪಬ್ಲಿಕ್ ನೆಕ್ಸ್ಟ್ ಅಣ್ಣಿಗೇರಿ
Kshetra Samachara
26/03/2022 11:39 am